||ಶ್ರೀ ಕ್ಷೇತ್ರ ಬೆಲಗೂರಿನ ಹನುಮ ಸ್ತುತಿ||
ರಚನೆ : ಶ್ರೀ ಶ್ರೀ ಶ್ರೀ ಪರಮ ಪೂಜ್ಯ ಬಿಂದು ಮಾಧವ ಶರ್ಮ ಸ್ವಾಮೀಜಿ
ಕದಂಬ ಗಿರಿಯ ಕದಳೀ ವನದೊಳು
ಹನುಮನು ಕುಳಿತಿದ್ದ,
ನಮ್ಮ ಹನುಮನು ಕುಳಿತಿದ್ದ ||ಪ||
ಕಣ ಕಣದಲ್ಲೂ ರಾಮ ನಾಮವ
ಸೂಸುತ ಮೆರೆದಿದ್ದ,
ಹನುಮ ಸೂಸುತ ಮೆರೆದಿದ್ದ ||ಅ.ಪ.||
ತಾರಕ ನಾಮವ ನೆನೆಯುತ ತಾನು ತನ್ಮಯನಾಗಿದ್ದ
ತನ್ನನೇ ಮರೆತು ರಾಮನು ತಾನೇ ಆಗೇ ಹೋಗಿದ್ದ||೧||
ಸಾಸಿರ ದಳದಲಿ ನುಡಿಯುವ ನಾದವ ಆಲಿಸಿ ಕೇಳಿದ್ದ
ನಾದವ ಕೇಳಿ ಮೋದವ ಹೊಂದಿ ನಾದವೇ ಆಗಿದ್ದ
ಹನುಮ ನಾದವೇ ಆಗಿದ್ದ ||೨||
ಅಲ್ಲಲರಸುತ ಗುಡಿಗಳ ತಿರುಗುತ ಗ್ರಾಮವ ಸೇರಿದ್ದ
ಬೆಲಗೂರ್ ಗ್ರಾಮವ ಸೇರಿದ್ದ
ವಿಶ್ವವಂದ್ಯನು ವೀರಪ್ರತಾಪ ತಾನೇ ಆಗಿದ್ದ
ಹನುಮ ತಾನೇ ಆಗಿದ್ದ ||೩||

0 ಕಾಮೆಂಟ್‌ಗಳು