|| ನರಸಿಂಹ ಸ್ತುತಿ ||
ನರಸಿಂಹ ಬಂದ ನೋಡಿ ಸ್ವಾಮಿ
ನರಸಿಂಹ ಬಂದ ನೋಡಿ ||ಪ||
ಲಕ್ಷ್ಮೀ ನರಸಿಂಹ ಬಂದ ನೋಡಿ
ಉಗ್ರರೂಪವ ತಾಳಿ ಖಳನನ್ನು ಸದೆಬಡಿಯೆ
ಕಂಬದಿಂ ಹೊರಬಂದ ದೇವ ನೋಡಿ ||ಅ.ಪ||
ಸನ್ಮಾರ್ಗದಲಿ ನಡೆವ ಸುಜನ ತಪಸಿಗಳೆಲ್ಲ
ಕ್ರೂರಿ ಹಿರಣ್ಯಕನ ಬಾಧೆಯ ತಾಳದೆ
ಶ್ರೀಹರಿಯ ಧ್ಯಾನಿಸುತೆ ಮೊರೆಯಿಡಲು ತಾನಾಗ
ನರಸಿಂಹ ರೂಪವನು ತಾಳಿ ಕಂಬದಿ ಭರದಿ||೧||
ಹರಿನಾಮ ತ್ಯಜಿಸೆಂದು ಬಲು ವಿಧದಿ ಶಿಕ್ಷಿಸಿ
ಕಂದ ಪ್ರಹ್ಲಾದನನು ನೋಯಿಸಲು ಪಿತನು
ಶ್ರೀಹರಿಯೆ ಗತಿ ನಮೋ ನಾರಾಯಣ ಎನಲು
ತ್ವರಿತದಲಿ ಬಂದು ಸಂರಕ್ಷಿಸುತ ನಿಲ್ಲಲು ||೨||
ಭುವಿಯೊಳಗೆ ನಾರಸಿಂಹನ ನಾಮವನು ಪಾಡಿ
ಕೊಂಡಾಡಿ ಸೇವೆಯನು ಮಾಡುತಿರುವ
ಭಕ್ತರನು ಕರುಣಿಪನು ಆನಂದ ವಿಠಲನು
ನಿರುತ ಸಲಹುತ ನಿಂದು ಭವ ಹರಿಪೆನೆಂದು ||೩||
ಹಾಡಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://www.facebook.com/100073572807787/posts/481486677647088/?mibextid=bgAApDAIfEsnpeLk
0 ಕಾಮೆಂಟ್‌ಗಳು