ನಾರಾಯಣ ನಿನ್ನ ನಾಮವೊಂದಿರುತಿರೆ - Narayana Ninna Namavondirutire

|| ನಾರಾಯಣ ಸ್ತುತಿ ||




ನಾರಾಯಣ ನಿನ್ನ ನಾಮವೊಂದಿರುತಿರೆ | 

ಬೇರೊಂದು ನಾಮ ವಿನ್ಯಾಕಯ್ಯ ||ಪ||


ನೆಟ್ಟನೆ ದಾರಿಯು ಬಟ್ಟೆಯೊಳಿರುತಿರೆ | 

ಬೆಟ್ಟವ ಬಳಿಸಲಿನ್ಯಾಕಯ್ಯ । 

ಅಷ್ಟೆ ಶ್ವರ್ಯವು ಮೃಷ್ಟಾನ್ನವಿರುತಿರೆ ಬೀದಿ | 

ಬಿಟ್ಟಿ ಕೂಳನು ತಿನ್ನಲ್ಯಾಕಯ್ಯ ||೧||


ಪುರುಷ ಸೇವಾಸಂಗಗಳಿರುತಿರೆ ಬೇರೆ | 

ಜನರಿಗೆಲ್ಲ ತೊಳೆಯಲಿನ್ಯಾಕಯ್ಯ । 

ಹರಿವಾಣದೊಳಗಮೃತಾನ್ನವು ಇರುತಿರೆ | 

ತಿರುಪೆ ಕೂಳನು ತಿನ್ನಲ್ಯಾಕಯ್ಯ ||೨||


ಬೆಲ್ಲವು ಕರದೊಳಗಿರುತಿರೆ ಕಾಡು | 

ಕಲ್ಲನ್ನು ಕಡಿಯಲೀಗ್ಯಾಕಯ್ಯ ॥ 

ಬಲ್ಲವ ನೆಲೆಯಾದಿ ಕೇಶವನಿರುತಿರೆ | 

ಚಿಲ್ಲರೆ ದೈವದ ಹಂಬಲ್ಯಾಕಯ್ಯ ||೩||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು