ರಾಮ ನಿನ್ನ ನಾಮ ಗೈವೆ ನಿತ್ಯ ಧ್ಯಾನ - Rama Ninna Nama Gaive Nitya Dhyana

|| ಶ್ರೀರಾಮ ಸ್ತುತಿ ||



ರಾಮ ನಿನ್ನ ನಾಮ ಗೈವೆ ನಿತ್ಯ ಧ್ಯಾನ 

ಸ್ವಾಮಿ ಬೇಗ ಬಂದು ಕಾಯೋ ಜಯ ಜಯ ರಾಮ 


ನನ್ನದಲ್ಲ ದೇಹ ಮನಸ್ಸು ನಿನ್ನದೆಲ್ಲವಯ್ಯ 

ನನ್ನದೆಂಬುದೊಂದೇ ಒಂದು ನಿನ್ನ ನಾಮವಯ್ಯ 

ರನ್ನ ರಂಗ ರಾಮ ಜಯ ಜಯ ರಾಮ 

ಸ್ವಾಮಿ ಬೇಗ ಬಂದು ಕಾಯೋ ಜಯ ಜಯ ರಾಮ 


ರಾಮ ರಾಮ ರಾಮ ಸೀತಾ ರಾಮ ರಾಮ ರಾಮ 

ಶ್ರೀ ರಘುರಾಮ ಸೀತಾರಾಮ ರಾಮ ರಾಮ ರಾಮ 


ಸ್ವಾಮಿ ಬೇಗ ಬಂದು ಕಾಯೋ ಜಯ ಜಯ ರಾಮ 


ಧರ್ಮ ಕರ್ಮಗಳನು ತಿಳಿಯೆ ಭಕ್ತಿ ಅರಿಯೆ ರಾಮ 

ನಿರ್ಮಲಾಂಗ ನೇಮದಿಂದ ನಿನ್ನ ಭಜಿಪೆ ರಾಮ 

ಧರ್ಮಪಾಲ ರಾಮ ಜಯ ಜಯ ರಾಮ 

ಸ್ವಾಮಿ ಬೇಗ ಬಂದು ಕಾಯೋ ಜಯ ಜಯ ರಾಮ 


ರಾಮ ರಾಮ ರಾಮ ಸೀತಾ ರಾಮ ರಾಮ ರಾಮ 

ಶ್ರೀರಘುರಾಮ ಸೀತಾರಾಮ ರಾಮ ರಾಮ ರಾಮ 


ಸ್ವಾಮಿ ಬೇಗ ಬಂದು ಕಾಯೋ ಜಯ ಜಯ ರಾಮ 

 

ಕಷ್ಟ ನಷ್ಟಗಳನ್ನು ತಿಳಿಯೆ ಭಕ್ತಿ ಅರಿಯೇ ರಾಮ  

ರಾಮ ರಾಮ ನಿನ್ನ ನಾಮ ನಿತ್ಯ ಗೈವೆ ರಾಮ 

ನಿತ್ಯ ಗೈವೆ ರಾಮ ಜಯ ಜಯ ರಾಮ 

ಸ್ವಾಮಿ ಬೇಗ ಬಂದು ಕಾಯೋ ಜಯ ಜಯ ರಾಮ 


ರಾಮ ರಾಮ ರಾಮ ಸೀತಾ ರಾಮ ರಾಮ ರಾಮ 

ಶ್ರೀ ರಘುರಾಮ  ಸೀತಾರಾಮ ರಾಮ ರಾಮ  ರಾಮ 

ಸ್ವಾಮಿ ಬೇಗ ಬಂದು ಕಾಯೋ ಜಯ ರಾಮ 

ರಾಮ ರಾಮ ಜೈ ಜೈ ರಾಮ ರಾಮ ಸೀತಾ ರಾಮ 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು