|| ಗಣಪತಿ ಸ್ತುತಿ ||
ಎರಗುವೆ ನಾ ಬೇಡುವೆ ನಾ
ನೀಡು ನೀ ಪುಷ್ಪವ ಗಜವದನಾ |
ಆದಿ ಶಕ್ತಿಯ ಸುತ ನೀನೆ
ಆದಿ ಪೂಜೆಯಾ ಪಡೆದವನೆ |
ಆದರದಿಂದಾ ಆದರಿಸುವೆವು
ಜ್ಞಾನ ಸುಮವನು ನೀಡೆಮಗೆ ॥ 1 ॥
ಗೋಕರ್ಣದೊೋಳು ನೆಲೆಸಿರುವ
ಘೋರ ಪಾಪವ ಪರಿಹರಿಸುವವ ॥
ಪರಿ ಪರಿ ಕಷ್ಟವ ನೀ ಪರಿಹರಿಸಿ
ಪತ್ರೆ ಪುಷ್ಪವಾ ನೀಡೆಮಗೆ ॥ 2 ॥
ಮಂಗಳಂ ನಿತ್ಯ ನಿರಂಜನಗೆ
ಮಂಗಳಕರ ಲಂಬೋದರಗೆ ॥
ಮಂಗಳ ಗೌರಿಯ ಪ್ರೇಮದ ಕುವರನೆ
ಮಂಗಳವನು ನೀ ನೀಡೆಮಗೆ ॥| 3 ॥
0 ಕಾಮೆಂಟ್‌ಗಳು