ಜಯಮಂಗಳಂ ನಿತ್ಯ ಶುಭಮಂಗಳಂ - Jayamangalam Nitya Shubhamangalam

|| ಮಂಗಳಾರತಿ ಹಾಡು ||




ಜಯಮಂಗಳಂ ನಿತ್ಯ ಶುಭಮಂಗಳಂ ॥ಪ॥ 


ಇಂದೀವರಾಕ್ಷಗೆ ಇಭರಾಜ ವರದಗೆ 

ಇಂದಿರಾರಮಣ ಗೋವಿಂದ ಹರಿಗೆ 

ನಂದನ ಕಂದಗೆ ನವನೀತ ಚೋರಗೆ 

ವೃಂದಾರ ಕೇಂದ್ರ ಉಡುಪಿಯ ಕೃಷ್ಣಗೆ ॥೧॥ 


ಕ್ಷೀರಾಬ್ಧಿ ವಾಸಗೆ ಕ್ಷಿತಿಜನ ಪಾಲಗೆ 

ಮಾರನ್ನ ಪಡೆದ ಮಂಗಳ ಮೂರ್ತಿಗೆ 

ಚಾರುಚರಣಗಳಿಂದ ಚೆಲುವ ಗಂಗೆಯ ಪಡೆದ 

ಕಾರುಣ್ಯಮೂರ್ತಿ ಕೌಸ್ತುಭಧಾರಗೆ ॥೨॥ 


ಮತ್ಸ್ಯಾವತಾರಗೆ ವೇದ ಉದ್ಧಾರಗೆ 

ವಾಸಿತಾನಂತಪದ ಸಕಲೇಶಗೆ 

ವಾಸುದೇವ ಮೂರ್ತಿ ಪುರಂದರ ವಿಠ್ಠಲಗೆ

ದಾಸರನು ಕಾಯ್ವ ರುಕ್ಮಿಣಿ ರಮಣಗೆ ॥೩॥ 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು