|| ಶ್ರೀರಾಮ ಸ್ತುತಿ ||
ರಚನೆ : ಪುರಂದರದಾಸರು
ಶರಣು ಸಕಲೋದ್ಧಾರ ಅಸುರ ಕುಲ ಸಂಹಾರ
ಶರಣು ದಶರಥ ಬಾಲ ಜಾನಕೀಲೋಲ ||ಪ||
ಈ ಮುದ್ದು ಈ ಮುಖವು ಈ ತನುವಿನಾ ಕಾಂತಿ
ಈ ಬಿಲ್ಲು ಈ ಬಾಣ ಈ ನಿಂತ ಈ ಭಾವ
ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ
ಯಾವ ದೇವರಿಗೆ ಉಂಟು ಮೂರುಲೋಕದೊಳಗೆ ||೧||
ಉಟ್ಟ ಪೀತಾಂಬಾರವು ಉಡಿಗೆಜ್ಜೆ ಮಾಣಿಕವೂ
ದೊಡ್ಡ ನವರತ್ನದ ಆಭರಣ ಇರಲು
ಕೊಟ್ಟ ಭಾಷೆಗೆ ತಪ್ಪ ನಿಜಭಕ್ತರಿಗೆ ಒಲಿವ
ಸೃಷ್ಟಿಯೊಳಗೆ ಕಾಣೆ ಕೌಸಲ್ಯರಾಮ ||೨||
ಪಾಲಿಸಲು ಅಯೋಧ್ಯ ಪಟ್ಟಣದಲ್ಲಿ ಪುರವಾಸ
ಬೇಡಿದ ಇಷ್ಟಾರ್ಥಗಳ ಕೊಡುವೆನೆನುತ
ಭಾವ ಶುದ್ಧಿಯುಳ್ಳ ತನ್ನ ಭಕುತರ ಪೊರೆವ
ಪುರಂದರ ವಿಟ್ಟಲನೆ ಅಯೋಧ್ಯ ರಾಮ||೩||
0 ಕಾಮೆಂಟ್‌ಗಳು