|| ಲಕ್ಷ್ಮಿ ಹಾಡು ||
ಸಿರಿದೇವಿ ಹರಿಯ ದಯವು | ಆವಾವ
ಪರಿಯೆ ಆ ಪರಿ ಪಾಲಿಸೆ ||ಪ||
ಆಲದೆಲೆಯಲಿ ಅಂದು|ನಿನ್ನಯಮ್ಯಾಲೆ ಮಲಗಿಪ್ಪ
ಹರಿಯ ತೋಳು ಬಿಗಿದಾಲಂಗಿಸಿ |
ಸೃಷ್ಟಿಯ ಲೀಲೆಯನು ಮಾಡಿಸಿದ ತಾಯೆ ||೧||
ವಕ್ಷವಾಲಯವ ಮಾಡಿದೆ|ಆವಾಗ ದಕ್ಷಣಾದೇವ್ಯೆನಿಸಿದೆ
ಲಕ್ಷ್ಯವಿಲ್ಲದೆ ಭಾಗ್ಯವ|ಭಕ್ತರಿಗೆ ವೀಕ್ಷೆಯಿಂದಲ್ಲಿ ಈವೆ||೨||
ದೇವತಾಜನ ಸ್ತುತಿಸೆ|ನೀ ಎನ್ನಭಾವ ಹರಿಯಲಿ
ನಿಲ್ಲಿಸೆಕಾವ ಭಾರವು ನಿನ್ನದೆ |
ಶ್ರೀ ವಾಸುದೇವವಿಠಲನ್ನ ರಾಣಿ ||೩||
0 ಕಾಮೆಂಟ್‌ಗಳು