|| ಶ್ರೀ ರಂಗ ಸ್ತುತಿ ||
ರಚನೆ : ಪುರಂದರದಾಸರು
ನಾನೇನ ಮಾಡಿದೆನೋ ರಂಗಯ್ಯ ರಂಗ
ನೀ ಯನ್ನ ಕಾಯಬೇಕೊ || ಪ ||
ಮಾನಾಭಿಮಾನವು ನಿನ್ನದು ಯನಗೇನು
ದೀನರಕ್ಷಕ ತಿರುಪತಿಯ ವೆಂಕಟರಮಣ||ಅ.ಪ||
ರಕ್ಕಸ ಸೂದನನೇ ಕೇಳೋ
ಧ್ರುವರಾಯ ಚಿಕ್ಕವನಲ್ಲವೇನೋ
ಉಕ್ಕಿಬರುವ ಕರ್ಮ ಮಾಡಿದ ಅಜಾಮಿಳ
ನಿನ್ನಕ್ಕನಮಗನೇನೋ || 1 ||
ಕರಿರಾಜ ಕರೆಸಿದನೇ ದ್ರೌಪದಿ ದೇವಿ
ಬರೆದೋಲೆ ಕಳುಹಿದಳೇ
ಹರುಷದಿಂದಲಿ ಋಷಿಪತ್ನಿಯ
ಶಾಪವ ಪರಿಹರಿಸಿದೆಯಲ್ಲೋ || 2 ||
ಮುಪ್ಪಿಡಿ ಅವಲಕ್ಕಿಯ ತಂದವನಿಗೆ
ಒಪ್ಪುವಂತೆ ಕೊಡಲಿಲ್ಲವೇ
ಸರ್ಪಶಯನ ಶ್ರೀ ಪುರಂದರ ವಿಠಲ
ಅಪ್ರಮೇಯ ಕಾಯೋ || 3 ||
0 ಕಾಮೆಂಟ್‌ಗಳು