ಹರುಷದಿಂದಲಿ ಕಾಯೋ ಹನುಮಾ - Harushadindali Kayo Hanuma

|| ಹನುಮ ಸ್ತುತಿ ||

 ರಚನೆ : ಆನಂದತೀರ್ಥರು 




ಹರುಷದಿಂದಲಿ ಕಾಯೋ ಹನುಮಾ 

ಹಾಲಬಾವಿಯೋಳಿರುವಂಥ ಭೀಮಾ |

ಗುರು ಮಧ್ವ ರಾಯರ ಚರಣಕೊಂದಿಪೆ ನಿತ್ಯ |

ಹರಿ ಸರ್ವೋತ್ತಮನೆಂಬ ನಿಜವಾದ ಮತಿ ಕೊಡು ಹನುಮಾ 

ಹಾಲಬಾವಿಯೋಳಿರುವಂಥ ಭೀಮಾ || ಪ||


ಅoಜನಾದೇವಿ ಸಂಭೂತಾ|

ಧನಂಜಯನಣ್ಣ ಅತಿ ಪ್ರಖ್ಯಾತಾ |

ಕುಂಜಲೋಚನ ರಾಮ ದೂತಾ|

ಕುರು ಭುಂಜಿಸಿ ಆನಂದತೀರ್ಥ |

ಅoಜಿಕಿನ್ಯಾತಕೆ ಸಂಜೀವ ರಾಯಾ | 

ಸೌಗಂಧಿಕಾ ಪುಷ್ಪ ತಂದ ಸುಂದರ ತಂದೆ ಶ್ರೀ ಹನುಮಾ||೧||


ಸಾಗರ ದಾಟಿದ ಧೀರ|ಧರ್ಮರಾಜನ್ನ ನಿಜ ವ್ರಕೋದರ | 

ಆ ಮಧ್ಯಗೇಹರ ಕುವರ|

ಹನುಮ ಭೀಮದೇವ ಮಧ್ವವತಾರ | 

ಆ ಮನೋಹರ ದಿವ್ಯ ರಾಮ ನಾಮಾಮೃತ |

ಪ್ರೇಮದಿ ಕರುಣಿಸೋ ಸ್ವಾಮಿ ದಯನಿಧೆ ಹನುಮಾ||೨||


ದೂರ ನೋಡದಿರೋ ಹನುಮಾ | 

ಕರ ಜೋಡಿಸಿ ಪ್ರಾರ್ಥಿಪೆ ಭೀಮಾ |

ಆನಂದ ತೀರ್ಥರ ಪ್ರೇಮದಿಂದ 

ವ್ಯಾಳ್ಯ ವ್ಯಾಳ್ಯಕೆ ಹರಿ ನಾಮಾ |

ಪ್ರೇರಣೆ ಮಾಡಿಸೋ ಭಾರತಿ ರಮಣನೆ | 

ಸಿರಿ ದೊರೆ ನರಹರಿ ವಿಠಲನ ನಿಜದೂತ ಹನುಮಾ||೩||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು