|| ಶ್ರೀರಾಮ ಸ್ತುತಿ ||
ಜಯ ಜಯ ರಾಮ ಶ್ರೀ ರಘು ರಾಮ ದಶರಥ ರಾಮ
ಕರುಣಾ ಧಾಮ ರಾಮ ಚಂದ್ರ ಸಾರ್ವಭೌಮ ತುಳಸಿ ಧಾಮ
ರಾಜ ರಾಮ ಶೀ ದಿವ್ಯ ನಾಮ ರಾಜ ರಾಮ ಶೀ ದಿವ್ಯ ನಾಮ
ನೀಲ ಮೇಘ ಶ್ಯಾಮ ನೀಡು ನಿತ್ಯ ಕ್ಷೇಮ
ರಘು ರಾಮ ರಘು ರಾಮ ಜಯ ರಾಮ ಸಂಗ್ರಾಮ ಭೀಮ ||ಪ||
ಶುದ್ಧ ಬ್ರಹ್ಮ ಪರಾತ್ಪರ ರಾಮ
ಕಾಲತ್ಮಕ ಪರಮೇಶ್ವರ ರಾಮ
ಚಂಡ ಕಿರಣ ಕುಲ ಮಂಡನ ರಾಮ
ಜಯ ರಾಮ ಶೀ ರಘು ರಾಮ
ಕೌಸಲ್ಯಾ ಪ್ರಿಯ ವರ್ಧನ ರಾಮ
ಕೌಷಿಕ ಯಾಗ ರಕ್ಷಕ ರಾಮ
ಗೌತಮಿ ಶಾಪ ವಿನಾಶಕ ರಾಮ
ಜಯ ರಾಮ ಶ್ರೀ ರಘು ರಾಮ
ಧರಣಿ ತನಯ ವಲ್ಲಭ ರಾಮ
ದಶರಥ ವಾಖ್ಯ ಪಾಲಕ ರಾಮ
ಕಾನನ ಗಮನ ದೀಕ್ಷಿತ ರಾಮ
ಜಯ ರಾಮ ಶ್ರೀ ರಘು ರಾಮ
ಗುಹ ಸಂಪೂಜಿತ ಚರಣಾ ರಾಮ
ಗಂಗಾ ವಾಹಿನಿ ತರಣಾ ರಾಮ
ದಂಡಕ ಕಾನನ ವಾಸಿತ ರಾಮ
ಜಯ ರಾಮ ಶ್ರೀ ರಘು ರಾಮ ||೧||
ಶ್ರೀಭಾರತಾರ್ಜಿತ ಪಾದ ರಾಮ
ಪಾವನ ಪಾದುಕ ದಾತಾ ರಾಮ
ಮುನಿ ಗಣ ಪೋಷಕ ಶ್ರೀಕರ ರಾಮ
ಜಯ ರಾಮ ಶ್ರೀ ರಘು ರಾಮ
ಕಾಂಚನ ಮೃಗ ಸಂಹಾರಕ ರಾಮ
ಸೀತಾ ವಿಯೋಗ ಶೋಕಿತ ರಾಮ
ಜಟಾಯು ಮೋಕ್ಷ ಕಾರಣ ರಾಮ
ಜಯ ರಾಮ ಶ್ರೀ ರಘು ರಾಮ
ಕಬಂಧ ರಾಕ್ಷಸ ನಾಶಕ ರಾಮ
ಕಿಷ್ಕಿಂದಾಪುರ ಗಮನ ರಾಮ
ಶ್ರೀ ಹನುಮಂತ ಸುಸೆವಿತ ರಾಮ
ಜಯ ರಾಮ ಶ್ರೀ ರಘು ರಾಮ
ದುಂದುಬಿ ಶರೀರ ತಾಂಡನ ರಾಮ
ಸಪ್ತ ತಾಳ ತರು ಭೋದಕ ರಾಮ
ವಾಲೀ ಗರ್ವ ವಿನಾಶಕ ರಾಮ
ಜಯ ರಾಮ ಶ್ರೀ ರಘು ರಾಮ ||೨||
ದಕ್ಷಿಣ ಸಾಗರ ಬಂಧನ ರಾಮ
ಲಂಕಾ ನಗರ ವಿನಾಶಕ ರಾಮ
ಸಾಧು ವಿಭೀಷಣ ಪೋಷಕ ರಾಮ
ಜಯ ರಾಮ ಶ್ರೀ ರಘು ರಾಮ
ರಾವಣ ಗರ್ವ ವಿಮರ್ದನ ರಾಮ
ಸೀತಾ ಶೋಕ ವಿನಾಶಕ ರಾಮ
ನಂದಿಗ್ರಾಮ ಪ್ರವೆಷಿತ ರಾಮ
ಜಯ ರಾಮ ಶ್ರೀ ರಘು ರಾಮ
ಶ್ರೀಭರತಾತ್ಮ ಪ್ರಭೋಧಕ ರಾಮ
ಅಯೋದ್ಯಾ ಪುರಿ ಪಾಲಕ ರಾಮ
ಹನುಮತ್ ಸೇವಿತ ನಿಜ ಪದ ರಾಮ
ಜಯ ರಾಮ ಶ್ರೀ ರಘು ರಾಮ
ಸೀತಾ ಲಕ್ಷ್ಮಣ ಹನುಮತ್
ಸೇವಿತಾ .............ಆ.......ಆ........ಅ ಅ ಅ .....
ಸೀತಾ ಲಕ್ಷ್ಮಣ ಹನುಮತ್ ಸೇವಿತ
ಸೀತಾ ರಾಮ ಪಟ್ಟಾಭಿ ರಾಮ
ಶರಣು ಶರಣು ಶರಣು ಶರಣು
ಜಯ ರಾಮ ಶ್ರೀ ರಘು ರಾಮ ||೩||
0 ಕಾಮೆಂಟ್‌ಗಳು