ವಾಸುದೇವಗೆ ಲಕ್ಷುಮಿ - Vasudevage Lakshumi

|| ಶ್ರೀ ಕೃಷ್ಣ ಸ್ತುತಿ ||




ವಾಸುದೇವಗೆ ಲಕ್ಷುಮಿ ಮಾಲೆ ಇಕ್ಕಿದಳೆ |

ವಾಸವ ವಂದ್ಯನೇ ವಾಸುಕಿ ಶಯನಗೆ 

ವಾಸಂತಿ ಮಾಲೆಯ ಕೊರಳೊಳಗಿಟ್ಟಳೆ||ಪ ||


ಆದಿ ಅಂತ್ಯ ರಹಿತನನ್ನು ಮೋದದಿಂದ ಮನದಿ ಭಜಿಸಿ 

ಮಾಧವ ಮುಕುಂದನೀಗೆ ಉಕ್ಕಿ ಮಾಲೆಯ ಇಕ್ಕಿದಳಾಗ ||೧||


ನಂದಗೋಪಿ ಕಂದನೆಂದು ಮಂದರ ಗಿರಿಯನೆತ್ತಿದನೆಂದು 

ಇಂದಿರೆಯ ಕಂದನೆಂದು ಉಕ್ಕಿಮಾಲೆಯ ಇಕ್ಕಿದಳಾಗ ||೨||


 ಅಂಬರೀಶ ಗೊಲಿದನೆಂದು ನಂಬಿದವರ ಕಾಯ್ವ ನೆಂದು 

 ಮಂಗ ಲಾಂಗ ನೀತಿನೆಂದು ಮಂದಗಮನೆ ಇಕ್ಕಿದಳಾಗ ||೩||


 ನಾರದಾದಿ ವಂದ್ಯನೆಂದು ನರಕಸುರನ ಕೊಂದನೆಂದು 

 ಮುರಗ ಜಾಜಿ ಮಲ್ಲಿಗೆ ತಂದು ಉರಗವೇಣಿ ಇಕ್ಕಿದಳಾಗ||೫||


 ಶಂಕ ಚಕ್ರಧಾರ ನಿಂದು ಬ್ರಹ್ಮಾಂಡಕೋಟಿ ವಂದಿತ ನೆಂದು 

 ಇಂದ್ರ ಚಂದ್ರವಂದ್ಯನೆಂದು ಮಂದಾರ ಮಲ್ಲಿಗೆ   ಇಕ್ಕಿದಳಾಗ||೬|| 


 ತೃಪ್ತ ಕಾಂತ ಸನ್ನಿಭನೆಂದು ಭಕ್ತ ಜನಕ ಪ್ರೀತನೆಂದು 

 ಭಕ್ತಿ ಮುಕ್ತಿ ದಾಯಕನೆಂದು ಉಕ್ಕಿಮಾಲೆಯ ಇಕ್ಕಿದಳಾಗ||೭||


ಅಷ್ಟವರ್ಣ ನಿತನೆಂದು ತುಷ್ಠ ರಾಮದಾಯಕನೆಂದು 

ಕೃಷ್ಣ ವಾಸುದೇವನೆಂದು ಉಕ್ಕಿಮಾಲೆಯ ಇಕ್ಕಿದಳಾಗ||೮||





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು