ಭಜಿಸುವೆ ಗಜಮುಖ ದೇವನ - Bhajisuve Gajamukha Devana

|| ಗಣೇಶ ಸ್ತುತಿ ||




ಭಜಿಸುವೆ ಗಜಮುಖ ದೇವನ |

ಅಜ ಸುರ ಮನು ಮುನಿ ವಂದ್ಯನ ||ಪ||

ಗಜ ಚರ್ಮಾಂಬರ ಧರ ಸುತ ಗಣಪನ |

ಸುಜನೋದ್ಧಾರ ಗಣೇಶನ ||ಅ.ಪ||


ಸಾಂಬ ಶಿವನ ವರ ಕಂದನಾ |

ತುಂಬುರು ನಾರದ ಸೇವ್ಯನಾ |

ಬೆಂಬಿಡದನುದಿನ ಭಜಕರ ಕರುಣದಿ |

ಸಂಭ್ರಮದಲಿ ಪೊರೆವಾತನ ||೧||


ದಶಭುಜ ಧರಿಸಿದ ದೇವನಾ |

ಪಶುಪತಿ ಈಶ ಕುಮಾರನಾ |

ವಸುಧೆಯೊಳಧಿಕ ಕುಟಚಾದ್ರಿ ಪುರದೊಳು |

ಕುಶಲದಿ ನೆಲೆಸಿದ ದೇವನಾ ||೨||


ಹೇರಂಬ ಮೊರೆಯಾ ಸಿದ್ಧಿ ಬುದ್ಧಿ ರಮಣ |

ಗಣೇಶ ವಕ್ರತುಂಡ ಅಖಂಡ ಭಜನಾ ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು