|| ಸರಸ್ವತಿ ಸ್ತುತಿ ||
ನಗುಮೊಗ ವಾಣಿ ವಿಧಿರಾಣಿ |
ನಿಗಮ ನಿರೂಪಿಣಿ ಜಗಜ್ಜನನಿ || ಪ ||
ತಾರಿಣಿ ತಾವರೆ ಮೊಗಸವಣಿ
ನೀರಜ ದಾಸನ ಕಾಂತಿಖನಿ |
ಘೋರಕುಠಾರಕರವಗಡನೀ
ಧೀರೆ ಮಹಾಮೋಹಿನಿ ಜನನಿ || 1 ||
ಕೋಮಲಕರ ಪುಸ್ತಕಪಾಣಿ
ಸೋಮಧರನಸತಿ ಫಣಿವೇಣಿ |
ಕಾಮಿನಿ ಕಾತ್ಯಾಯನಿ ಧರಣಿ
ಕಾಮಿತದಾಯಿನಿ ಕುಂಡಲಿನೀ || 2 ||
ಸಾಸಿರ ಸೌಮ್ಯ ಸುಧಾಕರ ನೀ
ಸಾಸಿರ ದಿವ್ಯ ದಿವಾಕರ ನೀ |
ಶ್ರೀ ಶರಮಾನಂದನ ರಾಣಿ
ಪೋಷಿಸು ನಾರಾಯಣಿ ಜನನಿ || 3 ||
0 ಕಾಮೆಂಟ್‌ಗಳು