ಬರಿ ಮೋಹದಿ ಬಳಲಿತು ಜೀವ - Bari Mohadi Balalithu Jeeva

|| ತತ್ವ ಪದ ||

ರಾಗ : ಕಾಮವರ್ಧಿನಿ 

ತಾಳ: ಆದಿ 





ಬರಿ ಮೋಹದಿ ಬಳಲಿತು | ಜೀವ । 

ಪರಿಹಾರ ಕಾಣೆನೋ ದೇವಾ॥ 

ದಾರಿ ತೋರದೆ ನಿರಾಶನಾದೆ । 

ಪರರ ಬಾಗಿಲ ಕಾಯ್ದೆ ॥ 

ದುರಿತ ರಾಶಿಯ ನಿವಾರಿಸೆಂದೇ । 

ಎರಗಿ ಬೇಡುವೆ ತಂದೇ ಬರಿ ಮೋಹದಿ॥ಪ॥ 


ಗತಿಯನೀವುದೇ । ಅಕಟದೇವಾ । 

ಎಂದು ನಿಲ್ಲಿಸುವೆ ಮನವಾ ॥ 

ಹಿತವ ಪೇಳಿತು ಎನರ್ನಿಜೀವ । 

ಗತಿಯ ಕಾಣೆನು ದೇವಾ ॥ ಬರಿ ಮೋಹದಿ॥೧॥ 


ಪರಿಭ್ರಮೆಯಿಂದಲಿ।ಕೆಡದಿರು ಮನುಜ । 

ಪರವಸ್ತುವ । ಮರೆತು ॥ 

ತರಳರು ಸತಿ । ಸೋದರ ಬಾಂಧವರು । 

ಮರಣಕಾಲದ ಕಾಯುವರೇ ॥ ಪರಿಭ್ರಮೆಯಿಂದಲಿ॥೨||


ಜನನಕೆ ಮುನ್ನ ನಿನಗವರಾರೋ । 

ನಿನಾರವರಿಗೆ ಮೂಢಾತ್ಮಾ

ತನುವಿರೊ ತನಕ । ಅನುಸರಿಸುವರು । 

ಕೊನೆಯಲಿ ಓರ್ವನೆ । ಕೇಳೋ ಮೂಡಾತ್ಮಾ॥ ॥ 

ಪರಿಭ್ರಮೆಯಲಿ | 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು