ಅಂಭರಪುರ ಹರ ಶಂಭ ತ್ರಯಂಬಕ Ambharapura Hara Shambha Trayambaka

|| ಶಿವ ಸ್ತುತಿ ||




ವಾಮದೇವ ವಿರಂಚಿತನಯ 

ಉಮಾಮನೋಹರ ಉಘ್ರದುರ್ಜಟಿ

ಸಾಮಜಾಜಿನ ವಸನಭೂಷಣ 

ಸುಮನ ಸೂಪ್ತಂಸಾ

                                ||ವಾಮದೇವ||

ಕಾಮಹರ ಕೈಲಾಸ ಮಂದಿರ 

ಸೋಮಸೂರ್ಯ ನಳ ವಿಲೋಚನ

‌ ‌‌‌‌‌‌‌ ||ಕಾಮಹರ||

ಕಾಮಿತಪ್ರದ ಕರುಣಿಸೆಮಗೆ 

ಸದಾ ಸುಮಂಗಳವಾ....ಆಆ..||ಕಾಮಿತ||

ಸದಾ ಸುಮಂಗಳವಾ. ...

ಸದಾ ಸುಮಂಗಳವಾ. ...


ಅಂಭರಪುರ ಹರ ಶಂಭ ತ್ರಯಂಬಕ

ಶಂಭಾರಾರಿ ರಿಪು ಗಂಭೀರ ಕರುಣೆ

ಶಂಭೋ ಸ್ವಯಂಭೋ ಸಂಭವಾ ಆ...ಆ...||2||

ನಂಬಿದೆ ಕಾಯೋ ಜಂಭಾರಿನುತ ಭವಾ||2||

                                   ||ಅಂಭರಪುರ||

ಜಂಭಾರಿನುತ ಭವಾ....


ಹಸಿತ ಭೂಷಿತ ಶರೀರ ಭಕ್ತರುಧ್ಧಾರ

ವಿಷಕಂಠ ದುರಿತ ಹರ||ಹಸಿತ||

ಪಶುಪತಿ ಫಣಿಪಹಾರ ಪಾವನಕಾರ 

ತ್ರಿಶೂಲ ಢಮರುಗಧರ

ವಸನಲಯನವಿಕಸಿತಾಂಭುಜಮುಖ 

ಶಶಿಧರ ಮಕರಕ್ಕಸ ಮದಮರ್ದನ||ವಸನ||

ಗಸನೆಗೊಳಿಪ ತಾಮಸವ ಕಳೆದು 

ಮಾನಸದಲಿ ರಂಗನ ಬಿಸಜ ಪದವ ತೋರೊ

ಶಂಭೋ ಸ್ವಯಂಭೋ ಸಂಭವಾ

ನಂಬಿದ ಕಾಯೊ ಜಂಭಾರಿನುತ ಭವಾ. ..

ಜಂಭಾರಿನುತ ಭವಾ. ...


ರಜತ ಪರ್ವತ ನಿವಾಸ ...ಆಆಆ..ಆಆ...

ರಜತ ಪರ್ವತ ನಿವಾಸ , ನಿರ್ಮಲ ಭಾಸ , 

ಗಜದೈತ ನಾಶ ಗಿರೀಶ||ರಜತ||

ಸುಜನರ ಮನೋವಿಲಾಸ , ವ್ಯೋಮಕೇಶ 

ತ್ರಿಜಗ ತಲ್ಲಣ ಗೌರೀಶ

ಅಜಸುತನದ್ವಾರ ಭಜನೆಯ ಕೆಡಿಸಿದೆ 

ಅಜಗರ ಮಂದಿರ ಗಜಮುಖ ಜನಕನೆ

                                    ||ಅಜಸುತನ||


ಗಜಗಮನೆ ಮುನಿ ತನುಜನ ಕಾಯ್ದನೆ 

ಸ್ರಜಮುನಿ ವಂದಿತ ಭಜಿಸುವೆ ನಿನ್ನನು 

ಶಂಭೋ ಸ್ವಯಂಭೋ ಸಂಭವಾ ನಂಬಿದೆ ಕಾಯೋ 

ಜಂಭಾರಿನುತ ಭವಾ.... ಜಂಭಾರಿನುತ ಭವಾ. ... 


ಮಧುರಾಪುರಿ ನಿಲಯ....ಆ....ಆ...ಆ... 

ಮಧುರಾಪುರಿ ನಿಲಯ , ಮ್ರತ್ಯುಂಜಯ 

ಸದಮಲ ಸುಮನಗೆಯ|ಮಧುರಾ। 

ಸದಾನಮಿಪರ ಹ್ರದಯದೊಳಗುಲ್ಲ ಭಯ 

ಸದೆಯುತ್ತ ಕೊಡು ಅಭಯ ಸದಾಶಿವ

ಜಾಹ್ನವಿ ಧರಕ್ರತ ಮಾಲ ನದಿತೀರದಿ 

ವಾಸವಾಗಿರ್ಪ ಸೌಂದರ್ಯ ॥ಸದಾಶಿವ॥ 


ಮಧುರಿಪು ವಿಜಯವಿಠ್ನಲನ ಪಾದಾಬ್ಜಕೆ 

ಮಧುಪನೆಂಬ ಪಂಚ ವದನ ಕೈಲಾಸದ 

ಶಂಭೋ ಸ್ವಯಂಭೋ ಸಂಭವಾ ನಂಬಿದೆ ಕಾಯೋ 

ಜಂಭಾರಿನುತ ಭವಾ. ... ಜಂಭಾರಿನುತ ಭವಾ. .. ॥

||ಅಂಭರಪುರ||

ಶಂಭೋ ಸ್ವಯಂಭೋ ಸಂಭವಾ. .. 

ಶಂಭೋ ಸ್ವಯಂಭೋ ಸಂಭವಾ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು