|| ಶಾರದಾ ಸ್ತುತಿ ||
ನಂಬಿದೆ ಜಗದಂಬೆ ಶಾರದೆ
ಮನ ಮಂದಿರದಿ ನೀ ನೆಲೆಸಬಾರದೆ||ಪ||
ಕಂಬುಕಂಠಿನಿ ತಾಯೆ ಶಾರದೆ
ಮನದಂಬಾರಿಯಲಿ ನಿನ್ನ ಮೆರೆಸುವೆ|
ಅಂಬುಜದಳನೇತ್ರೆ ಶಾರದೆ
ಬೆಂಬಿಡದೆಲೆ ಪೂಜಿಸೆ ಪೊರೆಯುವೆ||
ಕರದೊಳು ಪುಸ್ತಕ ಪಿಡಿದಿಹೆ
ಬೆರಳೊಳು ವೀಣೆಯ ನುಡಿಸುವೆ|
ಸೆರಗೊಡ್ಡಿ ನಾ ನಿನ್ನ ಬೇಡುವೆ
ಶಿರಬಾಗುತ್ತ ಚರಣಕೆ ಮಣಿಯುವೆ||
ಅಜ್ಞಾನ ತಿಮಿರವನೋಡಿಸು
ಸುಜ್ಞಾನ ದೀಪವ ಬೆಳಗಿಸು|
ಕೊಡು ವಿದ್ಯೆ ಬುದ್ಧಿಯ ದೇವಿಯೆ
ಮುದದಿಂದಲಿ ಸರಸ್ವತಿ ಮಾತೆಯೆ||
ಸರ್ವ ಕಲೆಗಳ ಒಡತಿಯೆ
ಪರಬ್ರಹ್ಮನ ಮುದ್ದಿನ ಮಡದಿಯೆ|
ನುಡಿಸಮ್ಮ ವಾಗ್ದೇವಿ ಶಾರದೆ
ಮುನ್ನಡೆಸಮ್ಮ ಕರಪಿಡಿದು ಕರುಣದೆ||

0 ಕಾಮೆಂಟ್ಗಳು