|| ದೇವಿ ಮಂಗಳ ಸ್ತುತಿ ||
ಮಂಗಳಂ ಎನ್ನಿರೇ ಮಹಾದೇವಿಗೆ
ಜಯ ಮಂಗಳಂ ಎನ್ನಿರೇ ಮಹಾಂಕಾಳಿಗೆ ||ಪ||
ಮಹಿಷಾಸುರನನು ಕೊಂದು ಮಹಿಷೆ ಎಂದೆಣಿಸಿದೆ
ಚಂಡಾಸುರನನು ಕೊಂದು ಚಾಮುಂಡಿಯಾದೆ
ನಂದಿವಾಹನವೇರಿ ಆದಿ ಶಕ್ತಿಯು ಆದೆ
ದಂಡ ಖಡ್ಗವ ಪಿಡಿದು ಧರೆಯನುದ್ಧರಿಸಿದೆ ||೧||
ಗಿರಿರಾಜನಲಿ ಜನಿಸಿ ಗಿರಿಜೆಯೆಂದೆಣಿಸಿದೆ
ಗಿರಿ ಮಧ್ಯದಲಿ ನಿಂತು ತಪವ ಗೈದೇ
ಗಿರಿಜೆ ಶಂಕರನೆಂಬ ಪೆಸರನೋದ್ದರಿಸಿದೆ
ಕರುಣಿಸೈ ಪಾರ್ವತಿಯೆ ಪರಶಿವನ ರಾಣಿ ||೨||
ಜನಕನಾಲಯದೊಳು ಸಿಲುಕಿ ಜಾನಕಿ ಎಂದೆಣಿಸಿದೆ
ದುಷ್ಟ ಪೌಂಡ್ರಿಕನ ಎದೆಯನ್ನೇ ಬಗೆದೆ
ಸಿಟ್ಟಿನಲಿ ರಾಕ್ಷಸರ ಸಂಹಾರವನು ಮಾಡಿ
ಮತ್ತೆ ಲೋಕಕೆ ನೀನು ಪ್ರಖ್ಯಾತಳಾದೆ ||೩||
ರಕ್ತ ಬೀಜಾಸುರನ ಶಕ್ತಿಯಲಿ ಸಂಹರಿಸಿ
ಹತ್ತು ಯೋಜನದಗಲ ನಾಲಗೆಯ ಚಾಚಿ
ವಿಸ್ತರಿಸಿ ಈ ಕಥೆಯ ಹೇಳಿ ಕೇಳಿದವರಿಗೆ
ವಿಷ್ಣು ಸಾಯುಜ್ಯದ ಪದವಿ ಕೊಡು ತಾಯೇ ||೪||

0 ಕಾಮೆಂಟ್‌ಗಳು