ವಂದನಂ ಗುರು ವೀರನೆ
ರಾಗ: ಕಲ್ಯಾಣಿ
ತಾಳಃ ಮಿಶ್ರಛಾಪು -
kannadabhajanlyrics.blogspot.com, belaguru Swamiji images |
ವಂದನಂ ಗುರು ವೀರನೇ |
ನಿಮಗೊಂದನಂ ಸುಖಸಾರನೆ ||
ಬಂಧ ಮೋಕ್ಷಗಳೆಂಬೊ ಎರಡರ |
ಸಂದು ತೋರಿದ ವೀರನೆ |
ಒಳಸಂದು ತೋರಿದ ಧೀರನೆ ||ಅ.ಪ.||
ತನ್ನ ನಿಜವನು ನೋಡರು |
ಈ ಭಿನ್ನವರಿಯದ ಮೂಢರು |
ತನ್ನ ನಿಜವನು ಕಂಡ ಮನುಜರು |
ಜನ್ಮವಳಿದು ಹೋದರು |
ಜನ್ಮವಳಿದು ಹೋದರು ||
ಹಿಂದೆ ಸುಕೃತವ ಮಾಡಿದೆ |
ಅದರಿಂದ ನಿನ್ನೊಳು ಕೂಡಿದೆ |
ಬಂಧವಿಲ್ಲದ ಮೋಕ್ಷ ಸಹಜಾ |
ನಂದ ಪದವಿಯ ಸೇರಿದೆ |
ಆನಂದ ಪದವಿಯ ಸೇರಿದೆ ||
ತಂದೆತಾಯಿಗಳಾದರೋ
ಬಹುಮಂದಿ ಕಳೆದೇ ಹೋದರು |
ತಂದೆ ಸದ್ಗುರು ಶಂಕರಾರ್ಯನೇ
ಹಿಂದೆ ನಿಲ್ಲುವ ದೇವರು ||
0 ಕಾಮೆಂಟ್‌ಗಳು