ಹರಿ ಭಜನೆ
ರಂಗನ ಭಜಿಸೋ | ಹಿಂಗದೆ ಮನದಣಿಯೋ ||
ರಾಮನಾ ಭಜಿಸೋ | ರಂಗನಾ ಭಜಿಸೋ ||
ಅಂಗಜನಾ ಪೆತ್ತವನಾ | ಮಂಗಳ ಶುಭಕರನಾ
||ರಂಗನಾ ಭಜಿಸೋ||
|| ಯಾತಕೆ ಸುಮ್ಮನಿರುವೆ | ಪಾತಕ ಹೆಚ್ಚಿ ಮೆರೆವೆ
ಭೂತಳ ಭೋಗ ಸ್ಥಿರವೇ | ಶಾಶ್ವತ ಮುಕ್ತಿಯ ಪಡೆವೆ
|| ರಂಗನಾ ಭಜಿಸೋ ||
|| ಆಸೆಯ ಬಿಟ್ಟು ಪಾಡೋ | ದೋಷಗಳಾ ನಿಡಾಡೋ ||
|| ಕೇಶವನಾ ಕೊಂಡಾಡೋ | ಶಾಶ್ವತ ಫಲಗಳ ಬೇಡೋ
|| ರಂಗನಾ ಭಜಿಸೋ ||
|| ತಾಮಸ ಗುಣವಳಿಯೋ|ಪ್ರೇಮದ ಖಳ ತುಳಿಯೋ ||
|| ರಾಮನು ದಿವ್ಯ ಚೆಲುವ|ಕಾಮಿತ ಫಲಗಳ ಕೊಡುವಾ
|| ರಂಗನಾ ಭಜಿಸೋ ||
|| ಪನ್ನಗ ಪುರಂದರನಾ|ಚೆನ್ನಿಗಾ ಸೋಮೇಶ್ವರನಾ ||
||ವರ್ಣಿಸಿ ಪೊಗಳುವನಾ|ಚಿನ್ಮಯ ಮೂಲ ಹರನಾ
|| ರಂಗನಾ ಭಜಿಸೋ ||
0 ಕಾಮೆಂಟ್‌ಗಳು