![]() |
belaguru bhajan lyrics, kannada bhajan lyrics, harinaama keerthane song lyrics in kannada |
|| ಹರಿನಾಮ ಕೀರ್ತನೆ ||
ರಾಗ :- ಸಿಂಧುಭೈರವಿತಾಳ :- ಆದಿ
|| ಹರಿನಾಮ ಕೀರ್ತನೆ | ಅನುದಿನ ಮಾಳ್ಪಗೆ | ನರಕ ಭಯಗಳುಂಟೆ ||
ನಾಮವೊಂದೇ ಯಮನಾಳ್ಗಳನೊದೆದು ||
ಅಜಮಿಳನಿಗೆ | ಸುಕ್ಷೇಮವಿತ್ತಾ ||
ಹರಿನಾಮ ಕೀರ್ತನೆ ||
ಕೇಸರಿಗಂಜದ | ಮೃಗವುಂಟೇ | ದಿನೇಶನಿಗಂಜದ ತಮವುಂಟೇ ||
ವಾಸುದೇವ ವೈಕುಂಠ ಜಗನ್ಮಯ ||
ಕೇಶವ ಕೃಷ್ಣಾ | ನೀನೆಂದುಚ್ಛರಿಸುತ ||
|| ಹರಿನಾಮ ಕೀರ್ತನೆ ||
|| ಕುಲುಷಕ್ಕೆದುರಿಪ | ಗಿರಿಯುಂಟೇ | ಬಲು |
ಪ್ರಳಯ ಬಂದಾಗ ಜೀವಿಪರುಂಟೇ ||
ಜಲಜನಾಭ | ಗೋವಿಂದ | ಜನಾರ್ಧನ ||
ಕಲುಷ ಹರಣ | ಕರಿರಾಜ ವರದನೆಂಬೆ ||
|| ಹರಿನಾಮ ಕೀರ್ತನೆ ||
|| ಗರುಡನಿಗಂಜದ | ಫಣಿಯುಂಟೇ |
ದಳ್ಳುರಿಯೊಳು ಬೇಯದ | ತೃಣವುಂಟೇ ||
ನರಹರಿ ನಾರಾಯಣ ದಾಮೋದರ ||
ಪುರಂದರ ವಿಠಲಾ | ನೀನೆಂದುಚ್ಛರಿಸುತ ||
|| ಹರಿನಾಮ ಕೀರ್ತನೆ ||
0 ಕಾಮೆಂಟ್‌ಗಳು