belaguru bhajan lyrics, kannada bhajan lyrics, sanna hudugiye ninna bhajan lyrics in kannada |
ರಾಗ :- ಮೋಹನ ಕಲ್ಯಾಣಿ
ತಾಳ :- ಆದಿ
|| ಸಣ್ಣ ಹುಡುಗಿಯೆ ನಿನ್ನ | ಬಣ್ಣಿಸಲಳವೇ ಮುನ್ನ ||
ಹೆಣ್ಣಿನ ಜಾಲಕ್ಕೆ ನಿನ್ನ | ಬೆನ್ನು ಹತ್ತಿ ಮುನಿಜನ ||
|| ಸಣ್ಣ ಹುಡುಗಿಯೆ ||
|| ನುಣ್ಣಗೆ ಸಂದಾನವರು ............. ಕುನ್ನಿ ಮನುಜಾರು ||
ಚೆನ್ನ ಚೆಲ್ವಿಕೆಗೆ ಸೋತು ಅರಣ್ಯದಿ | ಘನ ಸಿದ್ಧ ಋಷಿಗಳನು ಕೆಣಕಿ ||
ಬಲಗಣ್ಣು ಸನ್ನೆ ಮಾಡಿ | ಕಾಮಪಾಶದೊಳು, ಮಣ್ಣುಗೂಡಿಸಿದೆ ||
ಘನಘಾತುಕನಾ | ಕಂಡೆ ನಿನ್ನಲಿ | ಮಾಯೆ ಹೌದು ಬಿಡು ಬಿಡೂ ||
|| ಸಣ್ಣ ಹುಡುಗಿಯೆ ||
|| ಮೊದಲಿಗೆ ಶಿವನೊಳು | ಮುದದಿ ಮೋಹಿಸಿದವಳು ||
ಮದನ ತಂತ್ರದ ಸರಳ | ಸುದತಿಯರೋಳು ಮೇಲು ||
ಕದನ ಹಚ್ಚಿ ಲಂಕಾದ್ರಿಯ ಸುಡಿಸಿದೆ | ಅದನು ತಿಳಿದು ಸುಗ್ರೀವನ ಮಡದಿ ||
ನೆದರನಿಟ್ಟು ವಾಲಿಯನು ಹೊಡಿಸಿದೆ | ಒದಗಿ ಬ್ರಹ್ಮನ ಶಿರವನು ಕಡಿಸಿದೆ ||
ಅದನು ತಿಳಿದು ನಮಗ್ಹೆದರಿಕೆ ಬರುತಿದೆ | ಎದುರಿಗೆ ಬರುತಿರು ಪದಮ ಸುನೀತಳೇ..........||
|| ಸಣ್ಣ ಹುಡುಗಿಯೆ ||
|| ಆರನು ಕಾಣೆ ನಿನಗೆ | ನಾರೀ ಮಣಿಯರೊಳಗೆ ||
ಮೀರಿದ ವೈಯಾರಿ ನೀನೇ | ಮೂರು ಲೋಕ ನಿನ್ನ ಕೆಳಗೆ ||
ದ್ವಾರಕ ನಗರವ ನೀರೊಳು ಮುಣುಗಿಸಿ | ನಾರಾಯಣೆದೆ | ಮೆಟ್ಟಿ ಕುಳಿತೆ ಸಖಿ ||
ಧಾರುಣಿ ಪತಿ, ಪಾಂಡವರ ಜೂಜಲಿ | ಸೋಲಿಸಿ ಸೇರಿ ಅರಣ್ಯಕೆ ಅಟ್ಟಿಸಿ ||
ಸಾರಲೇನು ಶಿಶುನಾಳನ ಮುಂದೆ | ತೋರದಿರು ಬಡಿವಾರ ಬಜಾರೀ ||
|| ಸಣ್ಣ ಹುಡುಗಿಯೆ ||
0 ಕಾಮೆಂಟ್‌ಗಳು