shiv bhajan lyrics in kannada,belaguru bhajan lyrics,kannada bhajan lyrics, shiva shiva shivaya namah om lyrics in kannada |
|| ಶಿವ ಸ್ತುತಿ ||
ರಾಗ :- ಗೌಳ
ತಾಳ :- ಆದಿ
|| ಶಿವ ಶಿವ ಶಿವ ಶಿವಾಯ ನಮ ಓಂ | ಹರ ಹರ ಹರ ಹರಾಯ ನಮ ಓಂ ||
1. || ಆ ಮನೆ ಈ ಮನೆ | ಎರಡಾದರೇನು | ಜ್ಯೋತಿ ಹಚ್ಚಿದರೆ ಬೆಳಕೆಲ್ಲ ಒಂದೇ ||
ಬೆಳಕೆಲ್ಲಾ ಒಂದೇ | ಎರಡಿಲ್ಲ ತಂದೆ | ಎರಡಿಲ್ಲ ತಂದೆ | ಸದ್ಗುರು ಒಂದೇ ||
2. || ಮೆಣಸು ಮೆಣಸಿನಕಾಯಿ ಎರಡಾದರೇನು | ಕಡಿದು ನೋಡಿದರೆ ಖಾರೆಲ್ಲಾ ಒಂದೇ ||
ಖಾರೆಲ್ಲಾ ಒಂದೇ ಎರಡಿಲ್ಲ ತಂದೇ | ಎರಡಿಲ್ಲ ತಂದೆ | ಸದ್ಗುರು ಒಂದೇ ||
3 || ಕರಿದು ಬಿಳಿದು ಕೆಂಪು | ಆಕಳಾದರೇನು | ಕರೆದು ನೋಡಿದರೆ ಹಾಲೆಲ್ಲ ಒಂದೇ ||
ಹಾಲೆಲ್ಲ ಒಂದೇ ಎರಡಿಲ್ಲ ತಂದೆ | ಎರಡಿಲ್ಲ ತಂದೆ | ಸದ್ಗುರು ಒಂದೇ ||
4. || ಗುರುವು ಶಿಷ್ಯ ಇಬ್ಬರಾದರೇನು | ಬ್ರಹ್ಮೋಪದೇಶ ಮೂಲಮಂತ್ರ ಒಂದೇ ||
ಮೂಲಮಂತ್ರ ಒಂದೇ | ಎರಡಿಲ್ಲ ತಂದೆ | ಎರಡಿಲ್ಲ ತಂದೆ | ಸದ್ಗುರು ಒಂದೇ ||
0 ಕಾಮೆಂಟ್‌ಗಳು