belaguru bhajan lyrics, kannada bhajan lyrics, ganapathi bhajan lyrics, ganapathi gunamani namo namo lyrics |
|| ಗಣಪತಿ ಸ್ತುತಿ ||
ರಾಗ :- ದೀಪಕ್ತಾಳ :- ಆದಿ
|| ಗಣಪತಿ ಗುಣಮಣಿ ನಮೋ ನಮೋ | ಪ್ರಣವ ಸ್ವರೂಪನೆ ನಮೋ ನಮೋ ||
ಝಣತಕ ಧಿಮಿಕಿಟ | ತಾಳಮೃದಂಗದಿ | ಕುಣಿಯುತ ಮಣಿಯುವೆ ನಮೋ ನಮೋ ||
|| ಗಣಪತಿ ಗುಣಮಣಿ ||
|| ಶಕ್ತಿ ಗಣೇಶನೆ | ಭಕ್ತರ ಪಾಲನೆ | ಮುಕ್ತಿ ಪ್ರದಾಯಕ ನಮೋ ನಮೋ ||
ವ್ಯಕ್ತವಾಗು | ಅವ್ಯಕ್ತವ ಸೃಜಿಸುವ | ಮುಕ್ತಿ ಪ್ರದಾಯಕ ನಮೋ ನಮೋ ||
|| ಗಣಪತಿ ಗುಣಮಣಿ ||
|| ಗಜಮುಖ ಬೆನಕನೆ | ಸೊಂಡಿಲರೂಪನೆ | ಮಂಡಲಾಧಿಪನೇ ನಮೋ ನಮೋ ||
ತಾಂಡವ ನೃತ್ಯದಿ ಕಂಡೆನು ನಿನ್ನನು | ಸಿದ್ಧಿವಿನಾಯಕ ನಮೋ ನಮೋ ||
|| ಗಣಪತಿ ಗುಣಮಣಿ ||
|| ಪಾರ್ವತಿ ತನಯನೆ | ಧರ್ಮಸ್ವರೂಪನೆ | ಸರ್ವಗಣಾಧಿಪ ನಮೋ ನಮೋ ||
ದೂರ್ವೆಯೊಳರ್ಚಿಸಿ | ಮೋದಕ ಸಲಿಸುವೆ | ಸರ್ವೇಶ್ವರ ಗುರು ನಮೋ ನಮೋ ||
|| ಗಣಪತಿ ಗುಣಮಣಿ ||
|| ಈಶ ಕುಮಾರನೆ | ವಿಶ್ವಪ್ರಕಾಶನೆ | ಪಾಶಾಂಕುಶಧರ ನಮೋ ನಮೋ ||
ಮೂಷಕವಾಹನ | ಪಾಶವಿಭಂಜನ | ದೋಷನಿವಾರಣ ನಮೋ ನಮೋ ||
|| ಗಣಪತಿ ಗುಣಮಣಿ ||
|| ಲಂಬೋದರ ಹೇರಂಭ ಉರಗಧರ | ಸಂಭ್ರಮಶೀಲನೆ ನಮೋ ನಮೋ ||
ತುಂಬುರು ನಾರದ | ಸುರ ನರ ವಂದಿತ | ನಂಬಿದೆ ಸಲಹೋ ನಮೋ ನಮೋ ||
|| ಗಣಪತಿ ಗುಣಮಣಿ ||
|| ಸಿದ್ಧಿಬುದ್ಧಿಯರ | ಗೆದ್ದ ಮನೋಹರ | ವಿದ್ಯಾಧಿಪ ಗುರು ನಮೋ ನಮೋ ||
ಮುಗ್ಧ ವೈರಿ | ದುರ್ಬುದ್ಧಿಯ ಭೇದಿಸಿ | ಶುದ್ಧಬುದ್ಧಿ ಕೊಡು ನಮೋ ನಮೋ ||
|| ಗಣಪತಿ ಗುಣಮಣಿ ||
|| ಕನಕಾಂಬರಧರ | ಕಾಮಿತದಾಯಕ | ದೀನದಯಾಪರ | ನಮೋ ನಮೋ ||
ಅನುಪಮ ಜ್ಞಾನಾನಂದ ಪ್ರಚೋೀದಿತ | ದಿನಮಣಿ ಶಕ್ತಿಯೆ ನಮೋ ನಮೋ ||
|| ಗಣಪತಿ ಗುಣಮಣಿ ||
|| ಶೃಂಗರಿಸುವೆ ನಿನ್ನಂಗವ ಪೂಜಿಸಿ | ಅಂಗಜಾರಿಸುತ ನಮೋ ನಮೋ ||
ಕಂಗಳ ಬೆಳಕಿನ ಆರತಿ ಎತ್ತುವೆ | ಮಂಗಳ ಮೂರುತಿ ನಮೋ ನಮೋ ||
|| ಗಣಪತಿ ಗುಣಮಣಿ ||
2 ಕಾಮೆಂಟ್‌ಗಳು
Hi,this is really very nice blog.I have learned a lot of good and informative stuff from your blog.Thank you so much for sharing this wonderful post. Keep posting such valuable contents.
ಪ್ರತ್ಯುತ್ತರಅಳಿಸಿPlease visit our website by clicking the links given below.
krishna bhajan song
Bhojpuri Songs
lokgeet song
best hindi bhajan singer
Hi,this is really very nice blog.I have learned a lot of good and informative stuff from your blog.Thank you so much for sharing this wonderful post. Keep posting such valuable contents.
ಪ್ರತ್ಯುತ್ತರಅಳಿಸಿPlease visit our website by clicking the links given below.
krishna bhajan song
Bhojpuri Songs
lokgeet song
best hindi bhajan singer