belaguru bhajan lyrics, kannada bhajan lyrics, srungaravagihudu sri hariya mancha lyrics |
|| ಹರಿ ಸ್ತುತಿ ||
ರಾಗ :- ಮೋಹನತಾಳ :- ಖಂಡಛಾಪು
|| ಶೃಂಗಾರವಾಗಿಹುದು | ಶ್ರೀಹರಿಯ ಮಂಚ |
ಅಂಗನೆ ರುಕ್ಮಿಣಿಯರಸ | ಪವಡಿಸುವ ಮಂಚ || ಪಲ್ಲವಿ
|| ಬಡಗಿ ಮಟ್ಟದ ಮಂಚ|ಕಡಲಿನೊಳಗಿಹ ಮಂಚ ||
ಮೃಡನ ತೋಳಿನಲಿ|ಅಡಗಿರುವ ಮಂಚ |
ಹೆಡೆಯುಳ್ಳ ಹೊಸ ಮಂಚ|ಪೊಡವಿ ಪೊತ್ತಿಹ ಮಂಚ |
ಕಡಲ ಶಯನ ಶ್ರೀ|ರಂಗನಾ ಮಂಚ |
|| ಶೃಂಗಾರವಾಗಿಹುದು ||
|| ಕಾಲಿಲ್ಲದಿಹ ಮಂಚ | ಗಾಳಿನುಂಗುವ ಮಂಚ ||
ತೋಳು ಬಿಳುಪಿನ ಮಂಚ | ವಿಷದ ಮಂಚ |
ಕಾಳಗದೊಳರ್ಜುನನ | ಮುಕುಟ ಕೆಡಹಿದ ಮಂಚ |
ಕೇಳು ಪರೀಕ್ಷಿತನ | ಕೊಂದುದೀ ಮಂಚ ||
|| ಶೃಂಗಾರವಾಗಿಹುದು ||
|| ಕಣ್ಣು ಕಿವಿಯಾದ ಮಂಚ|ಬೆನ್ನು ಬಾಗಿದ ಮಂಚ ||
ಹುಣ್ಣಿಮೆಯ ಚಂದ್ರಮನ | ಅಡ್ಡಗಟ್ಟುವ ಮಂಚ |
ಬಣ್ಣ ಬಿಳುಪಿನ ಮಂಚ ||
ಹೊನ್ನಕಾದಿಹ ಮಂಚ|ಕನ್ನೆ ಮಹಲಕ್ಷ್ಮಿಯರಸನಾ ಮಂಚ ||
|| ಶೃಂಗಾರವಾಗಿಹುದು ||
|| ಹಕ್ಕಿಗೆ ಹಗೆ ಮಂಚ | ರೊಕ್ಕ ಮಟ್ಟದ ಮಂಚ ||
ರಕ್ಕಸರೆದೆಯನ್ನು | ನಡುಗಿಸುವ ಮಂಚ | ಸೊಕ್ಕು ಪಿಡಿದಿಹ ಮಂಚ ||
ಫಕ್ಕನೆ ನುಂಗುವ ಮಂಚ|ಲಕ್ಕುಮಿ ರಮಣ ಶ್ರೀಹರಿಯ ಮಂಚ ||
|| ಶೃಂಗಾರವಾಗಿಹುದು ||
||ಅಂಕುಡೊಂಕಿನ ಮಂಚ|ಅಕಲಂಕ ಮಹಿಮ ಮಂಚ ||
ಸಂಕರುಷಣಾನೆಂಬೊ | ಸುಖದ ಮಂಚ |
ಶಂಕರನ ಕೊರಳಿಗೆ ಪದಕವಾಗಿಹ ಮಂಚ ||
ವೆಂಕಟ ಪುರಂದರ | ವಿಠಲರಾಯನ ಮಂಚ ||
|| ಶೃಂಗಾರವಾಗಿಹುದು ||
0 ಕಾಮೆಂಟ್‌ಗಳು