ವಂದಿಸುವುದಾದಿಯಲಿ ಗಣ ನಾಥನ - Vandisuvudadiyali gananathana lyrics in kannada

Ganapathi Bhajan --  Vandisuvudadiyali gananathana lyrics in kannada,kannada bhajan lyrics, kannada devotional song lyrics
ganapathi bhajan lyrics, vandisuvudayali gananathana lyrics,purandara dasara devaranama lyrics

|| ಗಣಪತಿ ಸ್ತುತಿ ||

ರಾಗ :- ನಾಟ                                    ತಾಳ :- ಖಂಡಛಾಪು

ರಚನೆ :- ಪುರಂದರದಾಸರು


ವಂದಿಸುವುದಾದಿಯಲಿ ಗಣನಾಥನ    || ಪ ||
ಸಂದೇಹ ಸಲ್ಲ ಶ್ರೀ ಹರಿಯಾಜ್ಞೆಯಿದಕುಂಟು || ಅ.ಪ. ||

ಹಿಂದೆ ರಾವನ ತಾನು ವಂದಿಸದೆ ಗಜಮುಖನ
ನಿಂದು ತಪವನು ಗೈದು ವರ ಪಡೆಯಲು
ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿ
           ತಂದ ವರಗಳನೆಲ್ಲ ಧರೆಗೆ ಇಳಿಸಿದನು||1||       

ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆ
ಮುಂದೆ ಗಣಪನ ಪೂಜಿಸೆಂದು ಪೇಳೆ
ಒಂದೇ ಮನದಲಿ ಬಂದು ಪೂಜಿಸಲು ಗಣನಾಥ
          ಹೊಂದಿಸಿದೆ ನಿರ್ವಿಘ್ನದಿಂದ ರಾಜ್ಯವನು ||2||    

ಇಂದು ಜಗವೆಲ್ಲ ಉಮೆ ನಂದನನ ಪೂಜಿಸಲು
ಚಂದದಿಂದಲಿ ಸಕಲ ಸಿದ್ಧಿಗಳನಿತ್ತು
ತಂದೆ ಶ್ರೀ ಪುರಂದರ ವಿಠ್ಠಲನ ಸೇವೆಯೊಳು    
ಬಂದ ವಿಘ್ನವ ಕಳೆದಾನಂದವನು ಕೊಡುವಾ  ||3||    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು