belaguru bhajan lyrics, kannada bhajan lyrics, sringeri maathe sadaa poojithe song lyrics |
|| ಅಂಬಾ ಸ್ತುತಿ ||
ರಾಗ :- ಹಿಂದೋಳ
ತಾಳ :- ಆದಿ
|| ಶೃಂಗೇರಿ ಮಾತೆ | ಸದಾ ಪೂಜಿತೆ | ಬಂಗಾರ ಶಾರದೆ | ಚಿರಶಾಂತಿ ದಾತೆ ||
ಬಾರಮ್ಮ ಬಾ ತಾಯೆ | ಬಾ ಶಾರದೆ || ಶೃಂಗೇರಿ ಮಾತೆ ||
|| ತುಂಗೆಯೊಳ್ ಗಂಗೆಯೊಳ್ | ತನುವನ ಮೀಯಿಸಿ |
ಶ್ರೀಗಂಧ ಲೇಪಿಸಿ ಪರಿಮಳ ಸೂಸಿ ||
ಉಟ್ಟು ಪಿತಾಂಬರ | ಹೂಮಾಲೆ ಧರಿಸಿ |
ಬಾರಮ್ಮ ಹರಸಿ ನಸುನಗೆ ಸೂಸಿ ||
ಬಾರಮ್ಮ ಬಾ ತಾಯೆ | ಬಾ ಶಾರದೆ || ಶೃಂಗೇರಿ ಮಾತೆ || 1.
|| ಗುರು ಶಂಕರರೇ ವೇದದೊಳ್ ನುತಿಸಲು |
ಕರದೊಳು ವೀಣೆ ಸ.ಗ.ಮ.ದ.ನಿ | ನುಡಿಸಲು ||
ಭಾವ ರಾಗಲೆಯ | ಸಾಹಿತ್ಯ ಮೊಳಗಲು ||
ತವರಸ ಗಾನವು | ಜನಮನ ತಣಿಸಲಿ ||
ಬಾರಮ್ಮ ಬಾ ತಾಯೆ | ಬಾ ಶಾರದೆ || ಶೃಂಗೇರಿ ಮಾತೆ || 2.
|| ಡಕ್ಕಣ್ಣನಿಂದ ನಿರ್ಮಿತವಾದ | ದೇಗುಲದಲಿ ನೆಲೆಸಿರುವಾಗ ||
ಶಂಕರಾಚಾರ್ಯರಿಗೊಲಿದಿರುವ |
ತುಂಗಾ-ಭದ್ರಾ-ಭದ್ರಾಪುರಿಯಲಿ ನೆಲೆಸಿರುವಾ ||
ಬಾರಮ್ಮ ಬಾ ತಾಯೆ | ಬಾ ಶಾರದೆ || ಶೃಂಗೇರಿ ಮಾತೆ ||
|| ವೀಣಾವಾಣಿ | ಪುಸ್ತಕ ವಾಣಿ | ಗಿರ್ವಾಣಿ ಸುರಚಿರ ವೇಣಿ ||
ಸತ್ಯಲೋಕ ಬ್ರಹ್ಮಾನ ರಾಣಿ | ಶೃಂಗೇರಿ ಪುರವಾಸಿನೀ..........||
ಬಾರಮ್ಮ ಬಾ ತಾಯೆ | ಬಾ ಶಾರದೆ || ಶೃಂಗೇರಿ ಮಾತೆ || 3.
0 ಕಾಮೆಂಟ್‌ಗಳು