|| ದೇವಿ ಸ್ತುತಿ ||
ರಾಗ :- ಮೋಹನ
ತಾಳ :- ಛಾಪು
|| ವಾರಿಜಾಕ್ಷಿ | ನೀ | ಒಲವಿನೊಯ್ಯಾರಿ ||
|| ಬಾರೇ ನೀರೇ | ನಿನ್ನಗಲಿರಲಾರೆ || || ವಾರಿಜಾಕ್ಷಿ ||
|| ಹರನಾ ಹಡದೆ | ಅಜಶಿರ ಕಡಿದೆ ||
ವರ್ಗ ಮುರ ವೈರಿ | ಪುರದೊಳು ಮೆರೆದೆ ||
ಪರಮ ನಾರದ ಋಷಿಯ ಕಲಹದಿ | ಪರಿಯಪಡಿಸಿದ ಪಾವನಾತ್ಮಳೇ ||
ಧರೆಗೆ ಶಂಕರಿಯೆನಿಸಿ ಸಾಕ್ಷಾತ್ || ಹರನ ಶಿರದೊಳ್ ಮೆರೆದ ಮಾನುನಿ ||
|| ವಾರಿಜಾಕ್ಷಿ ||
|| ರಸಿಕ ವಚನದ | ಕುಸುಮ ಗಂಧಿಯಳೇ || ವಸುಧೆಯೊಳು | ವಿಷಯಕ್ಕೆ ಬಂದಿಹಳೇ ||
ವಸುಧೆಯೊಳು ಶಿಶುನಾಳಧೀಶನ | ಅಸುಳನಿಗೆ ಹಾದರವ ಕಲಿಸಿದೆ ||
ಉಸುರಿದಾತ್ಮ ಗೋವಿಂದ ಸದ್ಗುರು|ವಿಚಾರಕ್ಕೆ ಒದಗಿದ ||
|| ವಾರಿಜಾಕ್ಷಿ ||
0 ಕಾಮೆಂಟ್‌ಗಳು