ಭಜನೆ ಮಾಡುವ ಬನ್ನಿರೋ -- Bhajane maduva banniro

Shiva Bhajan -- Bhajane maduva banniro song lyrics in kannada,belaguru bhajan lyrics,kannada shiva bhajan lyrics
Bhajane maduva banniro lyrics,belagur bhajan lyrics,shiva bhajan lyrics,kannada bhajan lyrics

|| ಶಿವಸ್ತುತಿ ||

ರಾಗ :- ಕಾಂಬೋಧಿ
ತಾಳ

|| ಭಜನೆ ಮಾಡುವ ಬನ್ನಿರೋ | ಸದಾಶಿವನಾ | ಭಜನೇ ಮಾಡುವ ಬನ್ನಿರೋ ||
ಭಜನೆ ಮಾಡುವ ನಿತ್ಯ | ಸುಜನರೆಲ್ಲರೂ ಕೂಡಿ ||
ಕುಜನ ಸಂಗವ ದೂರ ಮಾಡಿ | ಸದ್ಭಕ್ತಿಯಲಿ | ಭಜನೆ ಮಾಡುವ ಬನ್ನಿರೋ ||

|| ಶತಕೋಟಿ ಪಾಪವನು | ಮಾಡಿರುವಂಥ | ಪತಿತರು ನಾವು ನೀವು ||
ಪತಿತಿ ಪಾವನನೆಂಬೊ | ಬಿರುದುಳ್ಳ ದೇವನು ||
ಕ್ಷಿತಿಯೊಳುತ್ತಮ ಗತಿ | ತೋರೆಂದು ಶಿವನಾ || ಭಜನೆ ಮಾಡುವ ಬನ್ನಿರೋ ||

|| ಘುಡಿಘುಡಿಸುತ ಬರುವ | ಯಮನಾಳ್ಗಳ ಕಡಿದು ಮಾಡುತ ಕೋಪವ ||
ಝಡಿದು ಶೂಲದಿ | ಭಕ್ತರನು ಕೈಯಾ ಪಿಡಿದು | ಕಡು ಕಾರುಣ್ಯದಿ 
ಪೊರೆಯುವ | ಮೃತ್ಯುಂಜಯನಾ ||

|| ಪಂಚ ವಿಶಂತಿ ತತ್ವದಿ | ತಾನಿರ್ದು ಪ್ರಪಂಚದೊಳಾನಂದದೀ ||
|| ಪಂಚ ವಿಶಂತಿ ಲೀಲೆ | ತೋರಿ ತನ್ನ ಭಕ್ತರ |
ಸಂಚಿತ ಕರ್ಮವನರುಹಿದ ಶಿವನಾ ||

|| ಕಷ್ಟ ಕರ್ಮಗಳ ನೋಡಿ | ನಿಮಿಷಾರ್ಧದಲಿ | ಸುಟ್ಟು ನಿರ್ಮೂಲನವ ಮಾಡಿ ||
ಇಷ್ಟಾರ್ಥಗಳನಿತ್ತು ಕರುಣಾದಿ ಪಾಲಿಪ | ಅಷ್ಟದಳದ ಪದ್ಮದಲ್ಲಿರುವ ಶಿವನಾ ||

|| ಕರುಣಾ ರಸವನೇ ಬೀರಿ | ಯೋಗವು ತತ್ವ | ನೆರೆಶಾಂತಿ ವಿರತಿ ತೋರಿ ||
ಧರೆಯೊಳಧಿಕ ಬ್ರಹ್ಮ | ಜ್ಞಾನವ ಬೋಧಿಪ | ಗುರು ಮಹಲಿಂಗನೇ 
ನೀನೆಂದು ಶಿವನಾ || ಭಜನೆ ಮಾಡುವ ಬನ್ನಿರೋ ||







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು