ಎಲ್ಲಿರುವೆ ತಂದೆ ಬಾರೋ ಮಾರುತಿ -- Elliruve thande baaro maaruthi

Maruthi Bhajan -- Elliruve thande baaro lyrics in kannada,kannada bhajan lyrics,Belagur bhajan
Kannada bhjan lyrics,elliruve thande baaro lyrics,belaguru bhajan lyrics

|| ಹನುಮ ಸ್ತುತಿ ||

ರಾಗ :- ಕಲ್ಯಾಣಿ

ತಾಳ :- ಆದಿ


|| ಎಲ್ಲಿರುವೆ ತಂದೆ ಬಾರೋ ಮಾರುತಿ ||
 ಎಲ್ಲಿರುವೆ ತಂದೆ ಬಾರೋ ||
ಎಲ್ಲಿ ಎಲ್ಲಿ ನೋಡಿದರು | ಅಲ್ಲೇ ನಿನ್ನ ಕೀರುತಿ ||
ಎಲ್ಲಿ ನೋಡಿದರೂ ನಿನ್ನ ಕೂಡಿರುವ ಶ್ರೀಪತಿ ||
ಎಲ್ಲಿರುವೆ ||

|| ರಂಗನರ್ಧಾಂಗಿಗೆ | ಉಂಗುರವನಿತ್ತು ನೀನು ||
ವನ ಭಂಗವ ಮಾಡಿದ್ಯಲ್ಲೋ | ಮಾರುತಿ ||
  ಎಲ್ಲಿರುವೆ  ||

|| ರಕ್ಕಸರ ಸೊಕ್ಕು ಮುರಿ | ಇಕ್ಕೆಲಂಗೆ ಉರಿ ||
ಇಕ್ಕಿ ಓಡಾಡಿದ್ಯಲ್ಲೋ | ಮಾರುತಿ ||
 ಎಲ್ಲಿರುವೆ  ||

|| ಶೇಷಗಿರಿ ವಾಸ ನಿನ್ನ | ದಾಸ ನಿಮ್ಮಯ ಪಾದ ||
ದಾಸನೊಳು ಕೃಪೆಯ ತೋರೋ | ಮಾರುತಿ ||  ಹರಿ  ||
ದಾಸನೊಳು ಕೃಪೆಯ ತೋರೋ | ಮಾರುತಿ ||  ಎಲ್ಲಿರುವೆ  ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು