ಕೋಡಗನ ಕೋಳಿ ನುಂಗಿತ್ತಾ -- Kodagana koli nungitta song lyrics in kannada

Thathva pada -- Kodagana koli nungitta song lyrics in kannada, kannada bhajan lyrics
belaguru bhajan lyrics, kannada bhajan lyrics, kodagana koli nungitta song lyris

|| ತತ್ವ ಪದ ||
ರಾಗ :- ಮಾಯಾಮಾಳವಗೌಳ
ತಾಳ :- ಆದಿ

|| ಕೋಡಗನ ಕೋಳಿ ನುಂಗಿತ್ತಾ | ನೋಡವ್ವ ತಂಗಿ || ಕೋಡಗನ ||

|| ಆಡು ಆನೆಯ ನುಂಗಿ | ಗೋಡೆ ಸುಣ್ಣವ ನುಂಗಿ |
ಆಡಲು ಬಂದ ಪಾತರದವಳ | ಮದ್ದಳೆ ನುಂಗಿತ್ತಾ | ತಂಗಿ ||
                                                   || ಕೋಡಗನ ||

|| ಒಳ್ಳು ಒನಕೆಯ ನುಂಗಿ | ಮಗ್ಗವ ಲಾಳಿ ನುಂಗಿ ||
ನೆಲ್ಲಲು ಬಂದ ಮುದುಕಿಯನ್ನು | ನೊಣವು ನುಂಗಿತ್ತಾ | ತಂಗಿ ||
                                                 || ಕೋಡಗನ ||

|| ಹಗ್ಗ ಮಗ್ಗವ ನುಂಗಿ | ಮಗ್ಗವ ಲಾಳಿ ನುಂಗಿ ||
ಮಗ್ಗದಲಿರುವ || ಅಣ್ಣನನ್ನು ಮನೆಯು ನುಂಗಿತ್ತಾ | ತಂಗಿ ||
                                                     || ಕೋಡಗನ ||

|| ಎತ್ತು ಭತ್ತವ ನುಂಗಿ | ಭತ್ತವ ಬಾನ ನುಂಗಿ ||
ಮುಕ್ಕುಟ ತಿರುವೋ ಅಣ್ಣನನ್ನು | ಮೇಳಿ ನುಂಗಿತ್ತಾ | ತಂಗಿ ||
                                                      || ಕೋಡಗನ ||

|| 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು