belaguru bhajan lyrics, kannada bhajan lyrics, nagu nagutha baramma banashankari lyrics |
|| ದೇವಿ ಸ್ತುತಿ ||
ರಾಗ :- ಮೋಹನತಾಳ :- ಛಾಪು
|| ಬಂದು ಕೂತಿಹಳು ನೋಡಿ | ಗಾಯತ್ರಿ | ನೀವಿಂದು ಕಣ್ತೆರೆದು ನೋಡಿ ||
ಬಂದು ನಿಮಿಷವು ಧ್ಯಾನಿಸಲ್ಭವ | ಬಂಧನವ ತಾ | ಕಳಚಿ ಬ್ರಹ್ಮಾ |
ನಂದ ಶರಧಿಯೊಳದ್ದಿ | ಸಲುಹುವೆನೆಂದು | ಹೃದಯಾಂಗಣದಿ | ಮುದದಿ ||
||ಪಲ್ಲವಿ ||
ಮೂರು ವರ್ಣದ ಕಾಯವೋ | ಗಾಯಿತ್ರಿಗೆ | ಆರು ವರ್ಣದ ಉಡಿಗೆಯೋ ||
ಏರಿ ಶಿರಗಳ ಪಂಚಬ್ರಹರ | ಮೇರುವಿಗೆ ಹನ್ನೆರಡು ಗೊಣಸುಗಳ್ |
ಸೇರಿಸಿ ಉಯ್ಯಾಲೆಯಾಡುತ | ಮೂರುಲೋಚನೆ | ಮುಕ್ತಿಕಾರಿಯು ||
|| ಬಂದು ಕೂತಿಹಳು||
|| ಮಿಸುನಿ ವಜ್ರಗಳಾರುಚಿ | ಚತುರಾಶ್ರಮೇ | ಬೆಸೆವಾರು ಕಲಶಂಗಳು ||
ಅಸಮ ಸಿಂಹಾಸನದ ವಾಸಿಯು | ವಸೆದು ಹತ್ತಾವ ತಾರ ಎತ್ತಿದ |
ಮಿಸುಪ ಓಡ್ಯಾಣಿರಿಸಿ ನಡುವಿಗೆ | ನಸುನಗುತ ಸಾವಿತ್ರಿ ದೇವಿಯು ||
|| ಬಂದು ಕೂತಿಹಳು ||
ವರಕುಚಯುಗಳ ಮಧ್ಯೆ | ದ್ವಾದಶ ವಜ್ರ | ಸ್ಪುರಿಸಿ ತೋರುವ ಪದಕ ||
ಎರಡು ಮೂರೈದಾರು ಸೇರಿದ | ಸರವು ಏಕಾವಳಿಯ ಕಂಠದಿ |
ಧರಿಸಿ ವೈಖರಿ ರೂಪಿನಿಂದಲಿ | ಹೊಳೆವ ಬ್ರಹ್ಮಾತ್ಮೈಕ್ಯ ಸರಸ್ವತಿ ||
|| ಬಂದು ಕೂತಿಹಳು ||
|| ನೀಲ ದರ್ಪಣ ಪಿಡಿದು | ಕೆಂಪಿನ ಬೊಟ್ಟು | ಫೌಲಮಧ್ಯಮ ನೋಡಿಟ್ಟು ||
ಓಲೆ ಜುಮುಕಿಯು | ಶೃತಿಗೆ ಶಿರಸಿನ | ಮೇಲೆ ನಾಸಿರ ದಳದಪದ್ಮವು |
ಲೀಲೆಯಿಂದುನ್ಮನೆಯೊಳಾಡುತ | ಏಳುಕೋಟಿ ಸುಮಂತ್ರ ದೇವತೆ ||
|| ಬಂದು ಕೂತಿಹಳು ||
|| ಚಿತ್ರ ನಕ್ಷತ್ರದಂತೆ | ವಿಭ್ರಾಜಿಪ | ಮುತ್ತಿನ ಮೂಗುತಿಯು ||
ಸತ್ ಚಿತ್ತಾನಂದ ರೂಪಿಣಿ | ಮಿಥ್ಯಮಾಯಾ ಕಲುಷಹಾರಿಣಿ |
ಕತೃಗುರು ಮಹಲಿಂಗ ರಂಗನ | ಶಕ್ತಿ ಸಾಕ್ಷಾತ್ ತ್ರಿಪುರ ಸುಂದರಿ ||
|| ಬಂದು ಕೂತಿಹಳು ||
0 ಕಾಮೆಂಟ್‌ಗಳು