||ಗಣಪತಿ ಸ್ತುತಿ||
ರಾಗ:- ಹರಿಕಾಂಬೋದಿ
ತಾಳ:- ಆದಿ
ತಾಳ:- ಆದಿ
ವಂದಿಪೆ ನಿಮಗೆ ಗಣನಾಥ |
ಮೊದಲೊಂದಿಪೆ ನಿಮಗೆ ಗಣನಾಥ ||
ಬಂದ ವಿಘ್ನ ಕಳೆಯೋ ಗಣನಾಥ |
ಮೊದಲೊಂದಿಪೆ ನಿಮಗೆ ಗಣನಾಥ ||
1. ಆದಿಯಲ್ಲಿ ಧರ್ಮರಾಯ|
ಪೂಜಿಸಿದ ನಿಮ್ಮ ಪಾದ||
||ಸಾಧಿಸಿದ ರಾಜ್ಯ ಗಣನಾಥ |
ಮೊದಲೊಂದಿಪೆ ನಿಮಗೆ ಗಣನಾಥ ||
2. || ಹಿಂದೆ ರಾವಣನು
ಮದದಿಂದ ನಿನ್ನ ಪೂಜಿಸದೆ ||
|| ಸಂದ ರಣದಲಿ ಗಣನಾಥ |
ಮೊದಲೊಂದಿಪೆ ನಿಮಗೆ ಗಣನಾಥ ||
3. || ಮಂಗಳ ಮೂರುತಿ ಗುರು
ರಂಗ ವಿಠಲನ ಪಾದ ||
|| ಭೃಂಗನೆ ಪಾಲಿಸೊ ಗಣನಾಥ |
ಮೊದಲೊಂದಿಪೆ ನಿಮಗೆ ಗಣನಾಥ ||
0 ಕಾಮೆಂಟ್‌ಗಳು