|| ಗಣಪತಿ ಸ್ತುತಿ ||
ರಾಗ :- ಹಂಸಧ್ವನಿ
ತಾಳ :- ಮಿಶ್ರಛಾಪು
ರಚನೆ :- ಪುರಂದರದಾಸರು
ಶರಣು ಬೆನಕನೆ ಕನಕರೂಪನೆ
ಕಾಮಿನೀಸಂಗ ದೂರನೆ || ಪ ||
ಶರಣು ಸಾಂಬನ ಪ್ರೀತಿ ಪುತ್ರನೆ
ಶರಣು ಜನರಿಗೆ ಮಿತ್ರನೆ || ಅ.ಪ. ||
1. ಏಕದಂತನೆ ಲೋಕಖ್ಯಾತನೆ
ಏಕವಾಕ್ಯ ಪ್ರವೀಣನೆ
ಏಕವಿಂಶತಿ ಪತ್ರಪೂಜಿತ
ಅನೇಕ ವಿಘ್ನವಿನಾಯಕ
2..ಲಂಬಕರ್ಣನೆ ನಾಸಿಕಾಧರನೆ
ಗಾಂಭೀರ್ಯಯುತ ಗುಣಸಾರನೆ
ಕಂಬುಕಂಧರ ಇಂದುಮೌಳಿಜ
ಚಂದನ ಚರ್ಚಿತಾಂಗನೆ
3. ಚತುರ್ಬಾಹು ಚರಣತೊಡವಿನ
ಚತುರ್ ಆಯುಧಧಾರನೆ
ಮತಿಯವಂತನೆ ಮಲಿನ ಜನಿತನೆ
ಅತಿಯ ಮಧುರಾಹಾರನೆ
4. ವಕ್ರತುಂಡನೆ ಮಹಾಕಾಯನೆ
ಅರ್ಕಕೋಟಿ ಪ್ರದೀಪನೆ
ಚಕ್ರಧರ ಹರಬ್ರಹ್ಮ ಪೂಜಿತ
ರಕ್ತ ವಸ್ತ್ರಾಧಾರನೆ
5. ಮೂಷಿಕಾಸನ ಶೇಷಭೂಷಣ
ಅಶೇಷ ವಿಘ್ನ ವಿನಾಯಕ
ದಾಸ ಪುರಂದರ ವಿಠಲೇಶನ
ಈಶ ಗುಣಗಳ ಪೊಗಳುವೆ
0 ಕಾಮೆಂಟ್ಗಳು