|| ರಾಮ ಕೀರ್ತನೆ ||
ರಾಗ :- ಬಿಲಹರಿ
ತಾಳ :- ಛಾಪು
|| ರಾಮ ಮಂತ್ರವ ಜಪಿಸೋ | ಹೇ ಮನುಜ ||
ರಾಮ ಮಂತ್ರವ ಜಪಿಸೋ ||
ಆ ಮಂತ್ರ ಈ ಮಂತ್ರ | ನೆಚ್ಚಿ ನೀ ಕೆಡಬೇಡ ||
ಸೋಮಶೇಖರ ತನ್ನ | ಸತಿಗೆ ಪೇಳಿದ ಮಂತ್ರ ||
|| ರಾಮ ಮಂತ್ರವ ಜಪಿಸೋ ||
|| ಕುಲಹೀನನಾದರೂ | ಕೂಗಿ ಜಪಿಸುವ ಮಂತ್ರ ||
ಸೆಲೆ ಬೀದಿಯೊಳ್ ನಿಂತು | ಸಾರಿ ಪೊಗಳುವ ಮಂತ್ರ ||
ಹಲವು ಪಾಪಂಗಳ | ಹದಗೆಡಿಸುವ ಮಂತ್ರ ||
ಸುಲಭದಿಂದಲಿ ಸ್ವರ್ಗ | ಸೂರೆಗೊಂಬುವ ಮಂತ್ರ ||
|| ರಾಮ ಮಂತ್ರವ ||
|| ಮರುತಾತ್ಮಜ ನಿತ್ಯ | ಸ್ಮರಣೆ ಮಾಡುವ ಮಂತ್ರ ||
ಸರ್ವ ಋಷಿಗಳಲಿ | ಸೇರಿಕೊಂಡಿಹ ಮಂತ್ರ ||
ದುರಿತ ಕಾನನಕಿಂತ | ದಾವಾನಲ ಮಂತ್ರ ||
ಏನೆಂಬೆ ವಿಭೀಷಣಗೆ | ಪಟ್ಟಗಟ್ಟಿದ ಮಂತ್ರ ||
|| ರಾಮ ಮಂತ್ರವ ||
|| ಜ್ಞಾನನಿಧಿ ನಮ್ಮ ಆನಂದತೀರ್ಥರು ||
ಸಾನುರಾಗದಿ ನಿತ್ಯ | ಸೇವಿಪ ಮಂತ್ರ ||
ಭಾನುಕುಲಾಂಬುಧಿ | ಸೋಮನೆನಿಪ | ನಮ್ಮ ||
ದೀನ ರಕ್ಷಕ ಪುರಂದರ ವಿಠಲನ ಮಂತ್ರ ||
|| ರಾಮ ಮಂತ್ರವ ||
0 ಕಾಮೆಂಟ್ಗಳು