ಗುರುವಿನ ಗುಲಾಮನಾಗುವ ತನಕ -- Guruvina gulama naguva thanaka song lyrics in kannada

|| ಗುರು ಭಜನೆ ||






ರಾಗ :- ಮಾಯಾಮಾಳವಗೌಳ
ತಾಳ :- ಆದಿ


ಪ    || ಗುರುವಿನ ಗುಲಾಮನಾಗುವ ತನಕ |
ದೊರೆಯದಣ್ಣ ಮುಕುತಿ ||
       ಪರಿ ಪರಿ ಶಾಸ್ತ್ರವನೋದಿದರೇನು |
ವ್ಯರ್ಥವಾಯಿತು | ಮುಕುತಿ ||


|| ಆರು ಶಾಸ್ತ್ರವ ನೋದಿದರೇನು |
ನೂರಾರು ಪುರಾಣವ ಮುಗಿಸಿದರೇನು ||
ಸಾರನ್ಯಾಯ ಕಥೆ | ಕೇಳಿದರೇನು |
ಧೀರನಂತೆ ತಾ ತಿರುಗದರೇನು ||
                     || ಗುರುವಿನ || 1.


|| ಕೊರಳೊಳು ಮಾಲೆ ಧರಿಸಿದರೇನು |
ಬೆರಳೊಳು ಜಪಮಣಿ ಎಣಿಸಿದರೇನು |
ಮರುಳನಾಗಿ ತಾ ಶರೀರಕೆ ಬೂದಿ |
ಬಳಿದುಕೊಂಡು ತಾ | ತಿರುಗಿದರೇನು ||
                 || ಗುರುವಿನ ||  2.


|| ನಾರಿಯ ಭೋಗ ಅಳಿಸಿದರಿಲ್ಲಾ |
ಶರೀರಕೆ ಸುಖವ ಬಿಡಿಸಿದರಿಲ್ಲಾ ||
ಮಾರಜನಕ ಶ್ರೀ ಪುರಂದರ ವಿಠಲನ | 
ಸೇರಿಸಿಕೊಂಡು ತಾ ಪಡೆಯುವ ತನಕ ||
                       || ಗುರುವಿನ ||  3.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು