ಹಾವು ತುಳಿದೇನೆ ಮಾನುನಿ -- Havu thulidene manuni song lyrics in kannada

|| ಗುರು ಭಜನೆ ||



ರಾಗ :- ಗೌಳ
ತಾಳ :- ಛಾಪು    

|| ಹಾವು ತುಳಿದೇನೆ |
 ಮಾನುನಿ ಹಾವು ತುಳಿದೇನೇ ||
ಹಾವು ತುಳಿದು ಹಾರಿ ನಿಂತೆ |
ಜೀವ ಕಳವಳಿಸಿತೇ ಗೆಳತಿ ||
ದೇಹತ್ರಯದ ಸ್ಮೃತಿಯು  ತಪ್ಪಿ |
 ದೇವಾ ನೀನೇ ಗತಿಯು ಎಂದು ||
             || ಹಾವು ತುಳಿದೇನೇ ||


1. || ಹರಿಗೆ ಹಾಸಿಗೆಯಾದ ಹಾವು |
ಹರನ ಕೊರಳಲ್ಲಿರುವ ಹಾವು ||
ಧರೆಯ ಪೊತ್ತು ನಿಲುವ ಹಾವಿನ |
ಶಿರವ ಮೆಟ್ಟಿ ಶಿವನ ದಯದಿ
                     || ಹಾವು ತುಳಿದೇನೇ ||


2. || ಬೋಧಾನಂದ ವಾಗಿ ಬರಲು |
ಹಾದಿಯೊಳಗೆ ಮಲಗಿ ಇರಲು ||
ಪಾದದಿಂದ ಪೊಡವಿಗೊತ್ತಿ |
ನಾದಗೊಳಿಸಿತು | ನಿಜದಿ ನೋಡಿ
                        || ಹಾವು ತುಳಿದೇನೇ ||

 
    3.  || ಕಾರ ಅಡಗಿ ಊರ ಹೊರಗೆ |
ದಾರಿ ಕಟ್ಟಿ ತರುಬಿದಂಥ ||
ಘೋರ ತರದ ಉರಗ ಅದರ |
ಕ್ವಾರೆ ಹಲ್ಲು ಮುರಿದ ತೆರದಿ ||
|| ಹಾವು ತುಳಿದೇನೇ ||


4. || ಸತ್ಯ ಶಿಶುನಾಳಧೀಶನ |
ಉತ್ತಮ ಸೇವಕನಿಗೆ ||
ಕತ್ತಲೊಳು ಬಂದು ಕಾಲಿಗೆ |
ಸುತ್ತಿಕೊಂಡಿತು ಸಣ್ಣ ನಾಗರ ||
|| ಹಾವು ತುಳಿದೇನೇ ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು