ಸೋರುತಿಹುದು ಮನೆಯ ಮಾಳಿಗೆ -- Soruthihudu maneya malige song lyrics in kannada


|| ಗುರು ಭಜನೆ ||

ರಾಗ :- ಗೌಳ
ತಾಳ :- ಛಾಪು

ಪ    || ಸೋರುತಿಹುದು|ಮನೆಯ ಮಾಳಿಗೆ | ಅಜ್ಞಾನದಿಂದ |
           ಸೋರುತಿಹುದು ಮನೆಯ ಮಾಳಿಗೆ ||

    1.    || ಸೋರುತಿಹುದು ಮನೆಯ ಮಾಳಿಗೆ | ದಾರುಗಟ್ಟಿ | ಮಾಳ್ಪರಿಲ್ಲ |
ಕಾಲ ಕತ್ತಲದೊಳಗೆ ನಾನು | ಮೇಲಕೇರಿ ಮೆಟ್ಟಲಾರೆ ||
                                           || ಸೋರುತಿಹುದು ||

2. ||ಮುರಕ ತೊಲಿಯು|ಹುಳಕ ಜಂತಿ |
ಕೊರೆದು ಕೊರೆದು|ಕೀಲಸಡಲಿ ||
ಹರಕು ಚಪ್ಪರ ಜೋರುಗಿಂಡಿ|ಮೇಲಕೇರಿ ಮಟ್ಟಲಾರೆ ||
                                          || ಸೋರುತಿಹುದು ||

3.||ಗರಿಕೆ ಹುಲ್ಲು ಕಸವು ಹತ್ತಿ|ದುರಿತ ಭವದಿ | ಇರುವೆ ಮುತ್ತಿ ||
ನಿರುತ ಭರದಿ|ತಿಳಿಯ ಮಣ್ಣು|ಹೊರಗೆ ಒಳಗೆ ಏಕವಾಗಿ ||
                                        || ಸೋರುತಿಹುದು ||

4. || ಕಾಂತ ಕೇಳೆ ಕರುಣದಿಂದ|ಬಂತು ಕಾಣೆ ಉಬ್ಬೆ ಮಳೆಯು ||
ಕಾಂತ ಶಿಶುನಾಳಧೀಶನಿಗೆ|ಮೇಘರಾಜ ಒಲಿದು ಬಂದಾ ||
                                             || ಸೋರುತಿಹುದು ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು