ಶ್ರೀ ಗುರುರಾಯ ನಿತ್ಯ ನಿಮ್ಮಯ --Sri gururaya nithya nimmaya

||ಗುರುಸ್ತುತಿ ||




ರಾಗ : ಮೇಚ ಕಲ್ಯಾಣಿ
 ತಾಳ : ಆದಿ


|| ಶ್ರೀ ಗುರುರಾಯ | ನಿತ್ಯ ನಿಮ್ಮಯ |
 ಚರಣ ಭಜನೆಯು ನಮಗಿರಲಿ ||
 ಅನ್ಯ ಗೋಷ್ಠಿಗಳು | ಇನ್ನು  ಬಾರದಂತೆ |
 ಎನ್ನ ಜನ್ಮ ಪಾವನ ಮಾಡೋ 
                           || ನಿತ್ಯ ನಿಮ್ಮಯ ||

 || ಉದಯದೊಳೇಳುತ  ಕುಳಿತಾಗ |
    ಅಧಿಕ ವಿಮಲ ಸುಖ ಪಡೆವಾಗ ||
    ಸದನಕೇರಿ ಸುಖ-ದುಃಖಾದಿಗಳನು |
    ಮದನಕೇರಿ ಮನ ಮೋಹಿಸುವಾಗ ||
                               ನಿತ್ಯ ನಿಮ್ಮಯ  ||

 || ಗಿರಿಗುಹೆ ಗವ್ವಾರೊದೊಳಿರಲಿ |
    ಉರಗ ವ್ಯಾಘ್ರದ ಶರಧಿಯೊಳಿರಲಿ
    ಗುಡುಗು ಸಿಡಿಲುಗಳು | ಗುಡಿಸುತ ಬರಲಿ |
    ಎರಕವಾಗಿರು ಶ್ರೀ ವಿರೂಪಾಕ್ಷ || ನಿತ್ಯ ನಿಮ್ಮಯ||
                                  || ಶ್ರೀ ಗುರುರಾಯ ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು