ಗುರುವೇ ಗತಿ ಎನ್ನು ಮನವೆ - Guruve Gathi Ennu Manave


|| ಗುರು ಸ್ತುತಿ ।।

ಗುರುವೇ ಗತಿ ಎನ್ನು ಮನವೇ
ತತ್ವ ಗುರುವಿನ ಪದಕಿಂತ ಪೆರತೊಂದು ಘನವೇ
ಕೇಳ್ ಪೆರತೊಂದು ಘನವೇ
ಗುರುವೇ ಗತಿ ಎನ್ನು ಮನವೇ    || ಪ ||

ಮರವೆಯಿಂ ಮರುಳನಾಗಿರುವೆ | ಮೂಳೆ ನರಮಾಂಸ ತನುವ ತಾನೆಂಬೋದು ತರವೇ |
ಅರಿಯದೆ ಹಿಂದೆ ನೊಂದಿರುವೆ | ಮುಂದೆ | ಕೊರತೆಯಿಲ್ಲದ ನಿಜಾನಂದದೊಳಿರುವೆ |
ಆನಂದದೊಳಿರುವೆ | ಗುರುವೇ ಗತಿ ಎನ್ನು ಮನವೇ ||

ಧನಧಾನ್ಯ ಬಂಧು ಭಾಗ್ಯಗಳು | ನಿನ್ನ | ಘನವ ನೀನರಿಯದ ಮಾಯಾಕಾರ್ಯಗಳು |
ಕೊನೆಗಾಣದಿರುವೋ ದುಃಖಗಳು | ಅಲ್ಲಿ | ಮನವಿಟ್ಟ ನರನಿಗೆ ಬಿಡದು ಕೋಳಗಳು ||
ಕೇಳ್ ಬಿಡದು ಬಂಧಗಳು | ಗುರುವೇ ಗತಿ ಎನ್ನು ಮನವೇ ||

ತನ್ನ ತಾ ತಿಳಿವ ಸಾಹಸವ | ಬಿಟ್ಟು | ನೀನೆಂದು ದೃಶ್ಯವಾಗುವ ಬೀದಿ ಕಸವ |
ಧ್ಯಾನಿಸುತಿರು ಓ ಮಾನಸವ | ಬಿಟ್ಟು | ನೀನೆಯಾದರೆ ಸೇವಿಸುವೆ ಸಿದ್ಧ ರಸವ |
ಶ್ರೀ ಗುರು ಸಿದ್ಧ ರಸವ | ಗುರುವೇ ಗತಿ ಎನ್ನು ಮನವೇ ||

ಕುರುಹಿಲ್ಲವದು ಶೂನ್ಯವಲ್ಲ | ನಿತ್ಯ | ನಿರತಿಶಯಾನಂದ ನುಡಿಯೊಳಗಿಲ್ಲ |
ಪರವಾದಿ ಇದನೇನ ಬಲ್ಲ | ಅಲ್ಲಿ | ಗುರುಶಂಕರರ ಬಿಟ್ಟು ಪೆರತೊಂಬೊದಿಲ್ಲ |
ಕೇಳ್ ಪೆರತೊಂಬೊದಿಲ್ಲ | ಗುರುವೇ ಗತಿ ಎನ್ನು ಮನವೇ ||






ಕಾಮೆಂಟ್‌‌ ಪೋಸ್ಟ್‌ ಮಾಡಿ

3 ಕಾಮೆಂಟ್‌ಗಳು

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)