ಸುಮ್ಮನೆ ಬ್ರಹ್ಮವಾಗುವನೆ - Summane brahmavaguvane song lyrics in kannada

      || ತತ್ವ ಪದ ||




ಸುಮ್ಮನೆ ಬ್ರಹ್ಮವಾಗುವನೇ |

ಮೂಲ  ಹಮ್ಮೆಲ್ಲ ಲಯವಾಗಿ

ಉಳಿಯದೆ ತಾನೇ ತಾನುಳಿಯದೆ ತಾನೇ

ಸುಮ್ಮನೆ ಬ್ರಹ್ಮವಾಗುವನೇ ||


1. ಸುಮ್ಮನಿದ್ದರೂ ಸುಖಿಸುವನೇ ಇದು
ನಮ್ಮದೆಂಬುದನು ಕೊಂದಿರುವೊ ಸಾಹಸನೇ

ಹೊಂದಿರುವೊ ಚಿದ್ರಸನೇ

ಸಮ್ಮಾನವನು ಮೀರಿದವನೆ

ಮೃತ್ಯುಸಂಹಾರಿಯಾಗಿ

ತಾಂಡವದೊಳಿರುವನೆ ಕುಂಡಲಿಯ

ಮೀರುವನೆ  || ಸುಮ್ಮನೆ ||



2.  ಪುಸ್ತಕವನು ಮುಚ್ಚಲಿಲ್ಲ ತಾನಾ
ಪುಸ್ತಕದೊಳಗೆಲ್ಲ ಶಿವನಾಗಲಿಲ್ಲ

ಕೇಶವನಾಗಲಿಲ್ಲ

ಸುಸ್ತುಗಳ್ ಬಯಲಾಗಲಿಲ್ಲ ಪರ

ವಸ್ತುವೆಂಬುದ ನೋಡಿ

 ಒಳಗಾಗಲಿಲ್ಲ ತನ್ನೊಳಗಾಗಲಿಲ್ಲ    ||

ಸುಮ್ಮನೆ ||


3.  ಮರಣ ಭೀತಿಯ ಬೇರ ಸುಡದೆ ತನ್ನ

ಪರಮಾನಂದವನೆ ಎಲ್ಲೆಲ್ಲಿಯುಂ ನೆಡದೆ

ಶರೀರದೊಳಭಿಮಾನ ಬಿಡದೇ

ನಮ್ಮ ಗುರುಶಂಕರನಿಗೆ

ಚಿತ್ತವನು ಒಪ್ಪಿಸದೆ ಚಿತ್ತವನು ಒಪ್ಪಿಸದೆ   

|| ಸುಮ್ಮನೆ  ||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು