|| ಹರಿ ಸ್ತುತಿ ||
ರಾಗ :- ಶಂಕರಾಭರಣ
ತಾಳ :- ಛಾಪು
|| ಪೋಗಾದಿರಲೋ | ರಂಗ | ಬಾಗಿಲಿಂದಾಚೆ | ಪೋಗಾದಿರೆಲೋ ರಂಗಾ ||
ಭಾಗವತರು ಕಂಡ | ರೆತ್ತಿಕೊಂಬೊಯ್ವರೋ || ಪೋಗಾದಿರೆಲೋ ರಂಗಾ ||
|| ಸುರಮುನಿಗಳು ತಮ್ಮಾ | ಹೃದಯಾಗಹ್ವರದೊಳಗೆ |
ಪರಮಾತ್ಮನ ಕಾಣದೇ | ಕೊರಗುವರೋ |
ದೊರಕಾದ ವಸ್ತ್ರವು | ದೊರಕಿತು ತಮಗಿಂದು ||
ಹರುಷದಿಂದಲಿ ಬಂದು | ಕರೆದೆತ್ತಿಕೊಂಬುವರೋ
|| ಪೋಗಾದಿರೆಲೋ ರಂಗಾ ||
|| ಅಗಣಿತಗುಣ ನಿನ್ನ | ಜಗದಾ ನಾರಿಯರೆಲ್ಲಾ |
ಹಗೆಯಾಗಿ ನೋಡುವರೋ | ಗೋಪಾಲನೇ ||
ಮಗುಗಳ ಮಾಣಿಕ್ಯ | ತಗಲಿತು ಕರಕೆಂದು | ಬೇಗಾದಿಂದಲಿ ಬಂದು ||
ಬಿಗಿದಪ್ಪಿ ಕೊಂಬುವರೋ ||
|| ಪೋಗಾದಿರೆಲೋ ರಂಗಾ ||
|| ದಿಟ್ಟ ನಾರಿಯರೆಲ್ಲಾ | ಇಷ್ಟಾವ ಸಲಿಸೆಂದು |
ಅಟ್ಟಟ್ಟಿ ಬೆನ್ನಟ್ಟಿ | ತಿರುಗುವರೋ ||
ಸೃಷ್ಠೀಶ ಪುರಂದರ | ವಿಠಲರಾಯನೇ | ಇಷ್ಟಿಷ್ಟು ಬೆಣ್ಣೆಯಾ ||
ಕೊಟ್ಟೇನೋ ರಂಗಯ್ಯಾ ||
|| ಪೋಗಾದಿರೆಲೋ ರಂಗಾ ||
0 ಕಾಮೆಂಟ್‌ಗಳು