॥ ಹನುಮ ಸ್ತುತಿ ॥
ರಾಗ : ಶಂಕರಾಭರಣ
ತಾಳ : ಆದಿ
|| ಪಾವನ ಗುಣ ರಾಮ ಹರೇ ರಾಮ ಹರೇ||
ಪರಮ ದಯಾ ನಿಲಯಾ|ಹರೇ ಪರಮ ದಯಾ ನಿಲಯಾ | ಹರೇ ||
ಪಾವನ ಗುಣ ರಾಮ || ಪಲ್ಲವಿ
|| ಮಾಯಾ ಮಾನುಷ | ರೂಪ | ಮಾಯಾತೀತ | ಮಂಗಳ ದಾತ ||
ವೇದಾಂತವದೂ | ಹೃದಯ ವಿಹಾರ ವೇದಮಯಾ | ಪರಮಾನಂದ ರೂಪ
|| ಪಾವನ ಗುಣ ರಾಮ || ೧.
|| ಕರುಣಾ | ರಸಭರ ನಯನಾ ||
ದರಹಾಸ ಮನೋಹರ ವದನಾ ||
ನವ ತುಳಸೀದಳ | ಮಾಲಾಭರಣ ||
ನಾನಾ ಜೀವನ |ನಾಟಕ ಕಾರಣ ||
|| ಪಾವನ ಗುಣ ರಾಮ || ೨
|| ಶ್ರೀಗುರುವರ ಕರುಣಾ ಸೀಮಾ | ಎನಗರುಹಿತು | ರಾಮನ ನಾಮ ||
ಶ್ರೀ ಗುರುವರ ಕರುಣಾ ಸೀಮಾ||
ರಾಮ ರಹೀಮ | ಕೃಷ್ಣ ಕರೀಮ |
ನಾಮರೂಪ ಜಗವೆಲ್ಲವು ರಾಮ ||
ಶ್ರೀ ಗುರುವರ ||
|| ತಂದೆ-ತಾಯಿ ಬಂಧೂ-ಬಳಗ || ಸಕಲ ಚರಾಚರ ಎಲ್ಲವು ರಾಮ ||
ಹಿಂದೆ ಮುಂದೆ ಎಂದೆಂದಿಗೂ ಎಲ್ಲಾ || ನಿಂದು ಸಲಹುವನು ರಾಮ
|| ಶ್ರೀಗುರುವರ ||
|| ಭಜನಾ ಹರಿಸೋವಾ | ಸುಜನಾ | ಶ್ರೀರಾಮರ ನಿಜಗುಣ ಧಾಮ ||
ಭಜನಾ ಹರಿಸೋವಾ ||
|| ಸಾಧನಾ | ಸದಾ | ರಾಮಧ್ಯಾನ | ಮುಕುತಿ ರೂಪ ಜನಾ ವದನಾ ||
|| ರಾಮ ಪಾಲಯ ಕೋದಂಡರಾಮ | ಪುಣ್ಯನಾಮ |
ರವಿಕುಲ ಸೋಮ | ರಾಮ ಪಾಲಯ ||
ಭೂಮಿಜಾಪತೆ | ಆನಂದ ಸೀಮ | ಗತಿಮತಿ ನೀನೇ ರಾಮಾ || ಭಜನಾ ಹರಿಸೋವಾ ||
|| ಭಜಮನ ಭಜಿರೆ ಶ್ರೀರಾಮ |
ಭಜಮನ ಭಜಿರೇ ಸೀತಾರಾಮ || ಭಜಮನ ||
ಮೋಹನ ರಾಮ | ಮಂಗಳಧಾಮ || ಮಾಯಾ ತಿಮಿರ ವಿರಾಮ ||
ಆತ್ಮ ರಾಮ | ಆನಂದ ರಾಮ | ಅಗಣಿತ ಗುಣಗಳ ತಾರಕನಾಮ ||
ಭಜಮನ ಭಜಿರೇ ||
|| ಜೈ ಜೈ ರಾಮ್ ಸೀತಾರಾಮ್ ಜೈ ಜೈ ರಾಮ್ ಸೀತಾರಾಮ್ ||
0 ಕಾಮೆಂಟ್‌ಗಳು