ರಾಮ ರಾಮ ಎನ್ನಿರಿ - Belaguru Bhajan - Rama Rama Enniri


 ಶ್ರೀರಾಮ ಸ್ತುತಿ

॥ ರಾಮ ರಾಮ ರಾಮ ರಾಮ ರಾಮ ರಾಮ ಎನ್ನಿರಿ ।

 ಕ್ಷೇಮವಿತ್ತು ಪೊರೆವ ರಾಮನಾಮವನ್ನು ಬಿಡದಿರಿ ॥

                                                    ॥ ರಾಮಾ ರಾಮಾ ॥


॥ ಜಾತಿ ವರ್ಣ ಕುಲಗಳೆಂಬ ಹೆಮ್ಮೆಯನ್ನು ಕಳೆಯಿರಿ ॥

ಪ್ರೀತಿಯಿಂದ ಎಲ್ಲರನ್ನು ಕಾಂಬೊದನ್ನು ಕಲಿಯಿರಿ ॥

ಮಾತು ಮಾತಿಗೊಮ್ಮೆ ರಾಮನಾಮ ಉಚ್ಛರಿಸಿರಿ ॥

ರಾಮಾ ರಾಮಾ ।

ಮಾತು ಮಾತಿಗೊಮ್ಮೆ ರಾಮನಾಮ ಉಚ್ಚರಿಸಿರಿ ॥

ಭೀತಿ ಇಲ್ಲ ಇನ್ನು ಮುಂದೆ । ಪೂತರಾದೆವೆನ್ನಿರಿ ॥

|| ರಾಮ ರಾಮ ||


ಧ್ಯಾನ ಮೌನವರಿಯದಿದ್ದರೇನು ಚಿಂತೆ |ಪಡದಿರಿ ||

ನಾನು-ನೀನು ಎಂಬ ಭೇದ|ಬುದ್ಧಿಯನ್ನು ತೊರೆಯಿರಿ ||

ದೀನಬಂಧು | ರಾಮನವನ | ನಾಮ ಉಚ್ಛರಿಸಿರಿ | 

ರಾಮ ರಾಮ|ದೀನಬಂಧು

ರಾಮನವನ ನಾಮ ಉಚ್ಚರಿಸಿರಿ ||

|| ಹಾನಿ-ವೃದ್ಧಿ ಇಲ್ಲದಿರುವ |ತಾಣವನ್ನೆ ಪಡೆಯಿರಿ ||


||ಹಣವು ವಿದ್ಯೆ|ಹರೆಯ ಬಲದ|

ಹೊಣೆಯು  ನೀವೇ|ನೋಡಿರಿ||

 ಕ್ಷಣದಿ ಮಾಯವಾಯ್ತು | ರಾವಣನ ಸಿರಿಯದಾ  ಪರಿ ||

 ಗುಣದ ಗಣಿಯು । ರಾಮನವನ ನಾಮ ಉಚ್ಛರಿಸಿರಿ ।

ರಾಮಾ  ರಾಮಾ । ಗುಣದ ॥

 ಎಣಿಕೆ ಇಲ್ಲದನಿತು ಕಾಲ । ಸುಖದಿ । ಸಂಚರಿಸಿರಿ ॥ 

ರಾಮಾ  ರಾಮಾ ॥


॥ ಹಿಂದೆ ಗೈದ ಪಾಪಕಾಗಿ । ಮನದಿ ಬೆದರ ಬೇಡಿರಿ ॥

 ಕುಂದುಕೊರತೆ ಎಲ್ಲ । ಮನ್ನಿಸೆಂದು ಬಾಗಿ ಬೇಡಿರಿ ॥

 ಒಂದೇ ಮನದಿ । ಕುಳಿತು । ರಾಮ ಧ್ಯಾನವನ್ನು ಮಾಡಿರಿ ॥

ರಾಮಾ  ರಾಮಾ | ಒಂದೇ || 

ಅಂದು ಬೇಡ|ಮೌನಿಯಾದುದಂದವನ್ನೆ ||ಸ್ಮರಿಸಿರಿ

ರಾಮಾ  ರಾಮಾ||


 ಪತಿತಪಾವನವು ರಾಮ||ನಾಮ ವೆಂದು ನಂಬಿರಿ ||

 ಸತತ ನಾಮ ಭಕುತಿಯನ್ನು| ಹೃದಯದೊಳಗೆ ತುಂಬಿರಿ||

 ಗತಿಯು ರಾಮನಾಮವೊಂದೇ |ಬಿಡದೆ ಉಚ್ಚರಿಸಿರಿ||

ರಾಮಾ  ರಾಮಾ | ಗತಿಯು||

 ವ್ರತವಿದೊಂದ  ಹಿಡಿದು|ಶಂಕರ ಸಮಾನರೆನಿಸಿರಿ|| 

ರಾಮಾ  ರಾಮಾ ||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು