ರಾಮ ಸ್ತುತಿ
|| ರಾಮ ರಾಮ | ಎಂಬೆರಡಕ್ಷರ ಪ್ರೇಮದಿ ಸಲಹಿತು | ಸುಜನರನು ||
|| ಹಾಲಹಲವನ್ನೇ ಪಾನವ ಮಾಡಿದ | ಫಾಲಾ ಲೋಚನನೇ | ಬಲ್ಲವನು ||
ಆಲಾಪಿಸುತ | ಶಿಲೆಯಾಗಿದ್ದ | ಬಾಲೆ ಅಹಲ್ಯೆಯ ಕೇಳೇನು ||
ರಾಮ ರಾಮ||
|| ಅಂಜಿಕೆ ಇಲ್ಲದೆ ಗಿರಿ ಸಾರಿದ ಕಪಿ | ಕುಂಜರ ರವಿಸುತ | ಬಲ್ಲವನು ||
|| ಎಂಜಲು ಫಲಗಳ | ಹರಿಗರ್ಪಿಸಿದ | ಕಂಜಲೋಚನೆಯ ಕೇಳೇನು ||
ರಾಮ ರಾಮ ||
|| ಕಾಲಾವನರಿತು | ಸೇವೆಯನು ಮಾಡಿದ | ಲೋಲ ಲಕ್ಷ್ಮಣನೇ ಬಲ್ಲವನು ||
ವ್ಯಾಳಾಶಯನ ಸಿರಿ | ವಿಜಯ ವಿಠಲನ | ಲೀಲೆ ಶರಧಿಯ | ಕೇಳೇನು ||
ರಾಮ ರಾಮ ||
0 ಕಾಮೆಂಟ್ಗಳು