ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ - kangalidyathako Kaveri Rangana



 ರಾಗ : ನಾದನಾಮಕ್ರಿಯೆ 

ತಾಳ : ಛಾಪು 


ಕಂಗಳಿದ್ಯಾತಕೋ ಕಾವೇರಿ

ರಂಗನ ನೋಡದ                                       || ಪಲ್ಲವಿ ||

ಜಗಂಗಳೊಳಗೆ ಮಂಗಳ ಮೂರುತಿ   

ರಂಗನ ಶ್ರೀ ಪಾದಂಗಳ ನೋಡದ                  || ಅ.ಪ ||


ಎಂದಿಗಾದರೊಮ್ಮೆ ಜನರು

ಬಂದು ಭೂಮಿಯಲ್ಲಿ ನಿಂದು

ಚಂದ್ರ ಪುಷ್ಕರಣಿ ಸ ಸ್ನಾನವ ಮಾಡಿ 

ಆನಂದದಿಂದಲಿ ರಂಗನ ನೋಡದ                   || ೧ ||


ಹರಿ ಪಾದೋದಕ ಸಮ ಕಾವೇರಿ 

ವಿರಜಾ ನದಿಲಿ ಸ್ನಾನವ ಮಾಡಿ

ಪರಮ ವೈಕುಂಠ ರಂಗ ಮಂದಿರ 

ಪರಮ ವಾಸುದೇವನ ನೋಡದ                     || ೨ ||


ಹಾರ ಹೀರ ವೈಜಯಂತಿ

ತೋರ ಮುತ್ತಿನ ಹಾರ ಧರಿಸಿ 

ತೇರನೇರಿ ಬೀದಿಲಿ ಮೆರವ

ರಂಗವಿಠ್ಶಲ ರಾಯನ ನೋಡದ                      || ೩ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು