||ಗುರು ಸ್ತುತಿ||
Belaguru bhajan, belaguru swamiji, gurupadadolu mana lyrics in kannada |
ಗುರುಪಾದದೊಳು ಮನ ಬೆರೆಯಲಿಲ್ಲಾ।
ಜನ್ಮ ಹರಿಯಲಿಲ್ಲಾ
ಸ್ಥಿರ ಮುಕ್ತಿ ಸುಖವದು ದೊರೆಯಲಿಲ್ಲಾ।
ಪಾಪಿ ಅರಿಯನಲ್ಲಾ ॥ಪಲ್ಲವಿ॥
ಜೀವ ಶಿವರಿಗೆ ಭೇದ ಮಾಡಬೇಡ।
ಅದ ನೋಡಬ್ಯಾಡ|
ಭಾವಿಸ ಕರ್ಮದೊಳು ಕೂಡಬ್ಯಾಡಾ।
ಓಡಾಡಬ್ಯಾಡ
ಎರಡೆಂಬ ಭ್ರಾಂತಿಯು ಪೋಗಲಿಲ್ಲಾ |
ಜನ್ಮನೀಗಲಿಲ್ಲಾ|
ಗುರುಪಾದ ಸೇವೆ ಕೊನೆ ಸಾಗಲಿಲ್ಲಾ|
ಬ್ರಹ್ಮನಾಗಲಿಲ್ಲಾ ||2||
ತನ್ನಾ ಮರೆತು ತನುವ ತೊಳದರೇನೂ।
ಬೂದಿ ಬಳಿದರೇನೂ
ಭಿನ್ನಿಸಿಗೈವ ಧ್ಯಾನ ಬಲ್ತರೇನೂ।
ವೇದ ಕಲ್ತರೇನೂ ||3||
ರೂಪು ನಾಮು ಬಿಟ್ಟ ಮೇಲೆ ಕೋಪವಿಲ್ಲಾ।
ಪುಣ್ಕಪಾಪವಿಲ್ಲ| ಆ
ಪರಬ್ರಹ್ಮನೊಳು ತಾಪವಿಲ್ಲಾ
ಅಧ್ಯಾರೋಪವೆಲ್ಲಾ ||4||
ಸತ್ಯವರಿತ ಮೇಲೆ ನೀತಿಯಿಲ್ಲಾ ।
ಕುಲಜಾತಿ ಇಲ್ಲ
ಮಿಥ್ಯೆಯ ಕಳೆದ ಮೇಲೆ ರೀತಿಯಿಲ್ಲಾ
ಲೋಕಭೀತಿಯಿಲ್ಲಾ ||೫||
ತಾನಾರು ಎಂಬುದ ತಿಳಿಯಬೇಕೂ|
ಭೇದವಳಿಯಬೇಕೂ।
ನಾನತ್ವ ಭಾವವನಳಿಯಬೇಕು
ಜನ್ಮ ಕಳಿಯಬೇಕು॥6||
ಜ್ಞಾನವಿಲ್ಲದ ಬರಿ ಮೌನವೇಕೆ ಜಪಧ್ಯಾನವೇಕೆ।
ತಾನೇ ತಾನಾದ ಮೇಲೆ ಮಾನ ಬೇಕೆ
ಗಂಗಾಸ್ನಾನ ಬೇಕೆ ||7||
ಅಂಕನಿಲ್ಲದ ಮೇಲೆ ಚಿಂತೆಯಿಲ್ಲಾ
ಬೇರೆ ಶಾಂತಿಯಿಲ್ಲಾ।
ಭ್ರಾಂತಿಯ ಕಳೆದ ಮೇಲೆ ಪಂಥವಿಲ್ಲಾ
ತನ್ನಂತೆಯೆಲ್ಲಾ ||8||
ಅಂಗಾತಾನಾದಮೇಲೆ ಭಂಗವಿಲ್ಲಾ
ಪಾಪ ಸಂಗವಿಲ್ಲಾ |
ಅಂಗವ ಕಳೆದ ಮೇಲೆ ರಂಗನಿಲ್ಲ
ನರಸಿಂಗನಿಲ್ಲಾ ||9||
ಸಂಶಯವಳಿಯೆ ದೇಹ ಬುದ್ಧಿಯಿಲ್ಲ
ಜಗದ ಸುದ್ದಿಯಿಲ್ಲಾ।
ಸಂಸಾರ ದೊಳಗವನಿದ್ದು ಇಲ್ಲಾ
ಮುಂದೆ ಬದ್ಧನಲ್ಲಾ ||10||
ಗುರುಶಂಕರಾರ್ಯನ ಚರಣದಲ್ಲಿ
ಶಿರವನಿರಿಸಿದಲ್ಲಿ|
ಮರಳಿ ಜನ್ಮಿಸನೀ ಧರಣಿಯಲ್ಲಿ
ಬೆರೆವ ಪರಮನಲ್ಲಿ ॥11||
3 ಕಾಮೆಂಟ್‌ಗಳು
Idara racahne: Shree Mysooru Shivarama ShastrigaLu
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿCan you please translate it to English. It will be very helpful.
ಪ್ರತ್ಯುತ್ತರಅಳಿಸಿ