|| ಬಿಂದುಮಾಧವ ಆರತಿ ||

ರಚನೆ : ಧ್ರುವಕುಮಾರ್ ಅವಧಾನಿ (ಧೃವಣ್ಣ )

Belaguru bhajan
Belaguru swamiji, belaguru bhajan lyrics


ಆರತಿ ಎತ್ತುವೆ ಸದ್ಗುರುರಾಯ ದೂರ

ಮಾಡೊ ಮೋಹ ಮಾಯ 


ಕುಂಕುಮ ಚಂದನ ಭಸ್ಮವ ಧರಿಸಿ

ಭವಾಬ್ದಿದಾಟಿಸು ನಮ್ಮನು ಹರಸಿ 


ಭಕುತರ ಹಣೆಗೆ ರಕ್ಷೇಯ ಇಟ್ಟೆ

ಭಕ್ತರ ಬವಣೆಯ ಕಳೆದು ಬಿಟ್ಟೆ 


ದಿವಿಯಲಿ ನೀನು ರವಿಯನು ಕಂಡೆ

ಭುವಿಯಲಿ ರವಿಯೋ ತನ್ನನೆ ಕಂಡ 


ಮಾಧವ ನಿನ್ನಯ ಸ್ಮರಣೆಯೆ ಚಂದ

ಮನದಲ್ಲೆ ನೆಲೆಸೋ ಲಕ್ಷ್ಮೀಯಕಂದ 


ವಿಡಂಬಣೆ ಅಲ್ಲವೆ ಲಕ್ಷ್ಮೀ ಪುತ್ರ

ಲಕ್ಷ್ಮೀ ಇಲ್ಲದೆ ನಟಿಸುವ ಪಾತ್ರ 


ಶೂನ್ಯದ ಹಿಂದೆ ಒಂದಾಗಿ ಬಂದು

ಶೂನ್ಯಕ್ಕೂ ಬೆಲೆಯ ತೋರಿದೆ ತಂದೆ 


ಕಪಿಯ ನುಡಿಯದು ಆಯಿತು ಸತ್ಯ

ಪರಿಪರಿ ತೋರ್ದೆ ಭಕುತಸಗೆ ನಿತ್ಯ 


ವಿಷಯದಲ್ಲೀಗಲೆ ವಿರತಿಯ ನೀಡು

ವಿವೇಚನೆಶಕ್ತಿ ನೀ ದಯಮಾಡು 


ಮನನವಾಗಲಿ ತತ್ವದ ಸಾರ

ಅದರಲ್ಲಡಗಿದೆ ಅದ್ವೈತ ಸಾರ 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು