|| ರಾಮ ಸ್ತುತಿ ||
ರಾಗ : ವಿಜಯನಾಗರಿ ತಾಳಃ ಆದಿ
kannadabhajanlyrics.com |
ಅಲ್ಲಿ ನೋಡಲು ರಾಮ |ಇಲ್ಲಿ ನೋಡಲು ರಾಮ |
ಎಲ್ಲೆಲ್ಲಿ ನೋಡಿದರೂ | ಅಲ್ಲಿ ಶ್ರೀ ರಾಮ |
ರಾವಣನ ಮೂಲಬಲ | ಕಂಡು ಕಪಿಸೇನೆ |
ಆವಾಗಲೇ ಬೆದರಿ | ಓಡಿದವು |
ಈ ವೇಳೆ ನರನಾಗಿ | ಇರಬಾರದೆಂದೆಣಿಸಿ |
ದೇವ ಶ್ರೀ ರಾಮಚಂದ್ರ | ಜಗವೆಲ್ಲ ತಾನಾದ | ೧.
ಅವನಿಗೆ ಇವ ರಾಮ | ಇವನಿಗೆ ಅವ ರಾಮ |
ಅವನಿಯೊಳೀ ಪರಿ । ರೂಪವುಂಟೇ।
ಕ್ಷಣ ಮಾತ್ರದಿ ಅಸುರ | ದುರುಳರೆಲ್ಲರು |
ಅವರವರೆ ಹೊಡೆದಾಡಿ | ಹತರಾಗಿ ಪೋದರು ॥ ೨.
ಹನುಮದಾದಿ ಸಾಧು | ಜನರು ಅಪ್ಪಿಕೊಂಡು |
ಕುಣಿಕುಣಿದಾಡಿದರು | ಹರುಷದಿಂದ ।
ಧರೆಯೊಳು ಪುರಂದರ | ವಿಠಲರಾಯನು |
ಕೊನೆಗೊಡೆಯನು ತಾ | ಒಬ್ಬನಾಗಿನಿಂದ ॥ ೩.
0 ಕಾಮೆಂಟ್‌ಗಳು