|| ರಾಮ ಸ್ತುತಿ ||
ರಾಗ : ವಿಜಯನಾಗರಿ
ತಾಳ : ಆದಿ
ರಾಮ ನಾಮ ಪಾಯಸ್ಕಕ್ಕೆ | ಕೃಷ್ಣ ನಾಮ ಸಕ್ಕರೆ |
ವಿಠಲ ನಾಮ ತುಪ್ಪವ ಬೆರೆಸಿ | ಬಾಯಿ ಚಪ್ಪರಿಸಿರೋ॥ಪ||
ಒಮ್ಮನ ಗೋಧಿಯ ತಂದು|ವೈರಾಗ್ಯ ಕಲ್ಲಲೀ ಬೀಸಿ|
ಸುಮ್ಮನ ಸಜ್ಜಿಗೆ ತೆಗೆದು|ಸಣ್ಣ ಸೇವಿಗೆ ಹೊಸೆದು||೧.
ಹೃದಯವೆಂಬೋ ಪಾತ್ರೆಯೊಳಗೆ|ಭಾವವೆಂಬೊ ಎಸರಾ ಇಟ್ಟು |
ಭಕ್ತಿಯಿಂದ ಪಕ್ಷವ ಮಾಡಿ|ಹರಿವಾಣದೊಳಗೇ ನೀಡಿ||
ಆನಂದ ಆನಂದವೆಂಬೊ|ತೇಗು ಬಂದಾ ಪರಿಯಲ್ಲಿ||
ಆನಂದ ಮೂರುತಿ ನಮ್ಮಾ | ಪುರಂದರ ವಿಶ್ವಲನ ನೆನೆಯಿರೋ | ೩.
0 ಕಾಮೆಂಟ್‌ಗಳು